ಅಬುಧಾಬಿ (www.vknews.in) : ಬಿಜಾಪುರದ ಅಬ್ರಾರ್ ಉಮರಾಣಿ ಬಂದೇನವಾಜ್ ಎಂಬವರು ಡಿಸೆಂಬರ್ 17ರಂದು ದುಬೈಯಲ್ಲಿ ಅಕಾಲಿಕ ಮರಣ ಹೊಂದಿದ್ದು, ಅವರ ಮೃತ ಶರೀರವನ್ನು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆ ಮತ್ತು ಅನಿವಾಸಿ ಕನ್ನಡಿಗರ ಸಹಾಯದಿಂದ ತಮ್ಮ ಹುಟ್ಟೂರಾದ ಬಿಜಾಪುರಕ್ಕೆ ಕಳುಹಿಸಿಕೊಡಲಾಯಿತು. ಅಬ್ರಾರ್ ಅವರು ಕಳೆದ ಕೆಲವು ವರ್ಷಗಳಿಂದ ಟೆಕ್ನಿಷಿಯನ್ ಆಗಿ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು,
ಮೃತ ದೇಹವನ್ನು ತಾಯಿನಾಡಿಗೆ ಕಳುಹಿಸಲು ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದ ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರೊಂದಿಗೆ ಅಬ್ರಾರ್ ಅವರ ಊರಿನವರಾದ ಶಂಕರ್ ಬಿರಾದರ್ ಬಿಜಾಪುರ ಮತ್ತು ರಫೀಕ್ ಬಿಜಾಪುರ ಅವರು ಮೃತ ದೇಹವನ್ನು ತಾಯಿನಾಡಿಗೆ ಕಳಿಸಲು ಬೇಕಾದ ಎಲ್ಲಾ ದಾಖಲೆಗಳ ಕಾರ್ಯ ಮಾಡಿ ಬಹಳ ಶ್ರಮ ವಹಿಸಿದ್ದರು. ಹಾಗೆ ಮರಣ ಹೊಂದಿದ ಸುದ್ದಿಯನ್ನು ಹೆಮ್ಮೆಯ ದುಬೈ ಕನ್ನಡ ಸಂಘಕ್ಕೆ ಬಸವ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಲಿಂಗದಳ್ಳಿ ಅವರು ತಿಳಿಸಿ ಬೇಕಾದ ಕಾರ್ಯಗಳನ್ನು ಮಾಡಲು ಸೂಚನೆ ನೀಡಿ ಸಹಕಾರ ಕೋರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.