ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಕೆಲ ತಿಂಗಳ ಹಿಂದೆ ಪ್ರತ್ಯೇಕವಾಗಿ ನಾಪತ್ತೆಯಾಗಿದ್ದ ಸಂಪಾಜೆ ಮೂಲದ ಇಬ್ಬರು ಮಹಿಳೆಯರನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಹಿಳೆಯರ ನಾಪತ್ತೆ ದೂರು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಮಹಾಲಕ್ಷ್ಮೀ ಎಂಬವರನ್ನು ಬೆಳ್ತಂಗಡಿಯಲ್ಲಿ ಹಾಗೂ ನಾಗವೇಣಿ ಎಂಬವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಮಹಾಲಕ್ಷ್ಮಿ ಎಂಬವರು ಬೆಳ್ತಂಗಡಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು, ಈ ಬಗ್ಗೆ ಮಾಹಿತಿ ಕಲೆ ಹಾಕಿ ಅಲ್ಲಿಗೆ ತೆರಳಿ ಅವರನ್ನು ಕರೆ ತಂದ ಪೊಲೀಸರು, ಬಳಿಕ ಮನೆಯವರನ್ನು ಕರೆಸಿ ಮಾತುಕತೆ ನಡೆಸಿ ಅವರನ್ನು ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ನಾಗವೇಣಿ ಎಂಬವರು ಪುಣೆಯಲ್ಲಿ ತನ್ನ ಪ್ರಿಯಕರನೊಂದಿಗಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆಕೆಯ ಪತಿಯೊಂದಿಗೆ ಪುಣೆಗೆ ತೆರಳಿದ ಪೊಲೀಸರು ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆಕೆ ಪತಿಯೊಂದಿಗೆ ಬರಲು ನಿರಾಕರಿಸಿ ಪ್ರಿಯಕರನೊಂದಿಗೆ ಇರುವುದಾಗಿ ಹೇಳಿದ್ದಾಳೆ. ಬಳಿಕ ಇಬ್ಬರ ವಿಚಾರಣೆ ನಡೆಸಿ ಹೇಳಿಕಗಳನ್ನು ಪಡೆದುಕೊಂಡು ಪೊಲೀಸರು ಸುಳ್ಯಕ್ಕೆ ವಾಪಸ್ಸಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.