ಸುರತ್ಕಲ್ (ವಿಶ್ವ ಕನ್ನಡಿಗ ನ್ಯೂಸ್) : ಸಮುದ್ರದ ಸೆಳೆತಕ್ಕೆ ಸಿಲುಕಿ ಶನಿವಾರ ಸಂಜೆ ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್ನಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಲೈಟ್ ಹೌಸ್ ಬೀಚ್ ನಿಂದ 1.5 ಕಿಮೀ ದೂರದಲ್ಲಿರುವ ರೆಡ್ ರಾಕ್ ಬೀಚ್ ನಲ್ಲಿ ಪತ್ತೆಯಾಗಿದೆ. ಕೆಪಿಟಿಯಲ್ಲಿ ಡಿಪ್ಲೊಮಾ ಓದುತ್ತಿದ್ದ, ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ ಮೃತಪಟ್ಟ ಯುವಕ.
ಸತ್ಯಂ ಮತ್ತು ಆತನ ಸ್ನೇಹಿತ ಸಮುದ್ರದಲ್ಲಿ ಈಜಲು ಹೋಗಿ ಇಬ್ಬರೂ ಸಮುದ್ರದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಆದರೆ ಸತ್ಯಂನ ಸ್ನೇಹಿತ ಸುರಕ್ಷಿತವಾಗಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದು, ಸತ್ಯಂ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.