www.vknews.in)ಎಚ್.ಐ.ಎಫ್ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ ಬಡವರಿಗೆ ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವಂತಹ 27ನೇ ಮನೆಯನ್ನು
ಕಡಬ ತಾಲೂಕಿನ ತುಂಬೆ ಮನೆ ರೆಂಜಲಾಡಿ ಗ್ರಾಮದ ಬಳಿ ವಿಧವೆ ಫಲಾನುಭವಿಗೆ ಹಸ್ತಾಂತರಿಸಲಾಯಿತು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಯೂಸುಫ್ ಪೇರಡ್ಕ ಪೋಸೋಲಿಗೆ ಉಪಸ್ಥಿತರಿದ್ದರು.
ಜುಮಾ ಮಸೀದಿಯ ಖತಿಬ್ ರಫೀಕ್ ದಾರಿಮಿಹೊಸಮನೆಯ ಕೈ ಕೀಲಿ ಮತ್ತು ಒಂದು ತಿಂಗಳ ರೇಷನ್ ಫಲಾನುಭವಿಗೆ ನೀಡಲಾಯಿತು.
ನೂಜಿಬಾಳ್ತಿಲ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಇಮ್ಯಾನುಯೆಲ್ ಪಿಜೆ ಮಾತನಾಡಿ ಮೂಲಭೂತ ಸೌಕರ್ಯದಿಂದ ವಂಚಿತ ಕುಟುಂಬಗಳಿಗೆ ಸೊಸರ್ಜಿತ ಮನೆ ನಿರ್ಮಾಣ ಕಾರ್ಯ ನಿಜಕ್ಕೂ ಶ್ಲಾಘನೀಯ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಎಚ್.ಐ.ಎಫ್ ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ಔಸಾಫ್ ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು 28ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಸೈಫ್ ಹನೀಫ್ ಕಿರಾತ ಪಟಿಸಿದರು ಆದಿಲ್ ಪರ್ವೇಜ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.