(www.vknews.in)ಮಂಗಳೂರು : ಕರ್ನಾಟಕ ಸುನ್ನಿ ಸಂಘಗಳ ಕಾರ್ಯಾಚರಣೆಯ ಏಕೀಕರಣ ವ್ಯವಸ್ಥೆ ಯ ಕಾರ್ಯಚಟುವಟಿಕೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ .ಅದರಂತೆ ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ಸುನ್ನಿ ಯುವಜನ ಸಂಘ SჄS ,ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ SSF ಕ್ರಮವಾಗಿ ಸುನ್ನಿ ಸಂಘ ಕುಟುಂಬದ ಯುವಜನ ಹಾಗೂ ವಿದ್ಯಾರ್ಥಿ ಸಂಘಟನೆಗಳಾಗಿ ಕಾರ್ಯಾಚರಿಸಲಿದೆ. ನೂತನ ಸಂಘಟನಾ ವ್ಯವಸ್ಥೆ ಯಂತೆ ಈ ಬಾರಿ ಏಕ ಕಾಲದಲ್ಲಿ ಸಂಯುಕ್ತ ವಾಗಿ ಈ ಮೂರು ಸಂಘಟನೆಗಳ ಸದಸ್ಯತ್ವ ಅಭಿಯಾನ ನಡೆಯಲಿದೆ. ಇದರ 2023 ಜನವರಿ 1 ರವಿವಾರ ಸದಸ್ಯತ್ವ ದಿನವಾಗಿದ್ದು ಅಂದು ಪ್ರತೀ ಮೊಹಲ್ಲಾಗಳಲ್ಲಿ ಮೂರು ಸಂಘಟನೆಗಳು ಜಂಟಿಯಾಗಿ ಸದಸ್ಯತ್ವ ಕ್ಕೆ ಚಾಲನೆ ನೀಡಲಿದ್ದಾರೆ. ಸದಸ್ಯತ್ವ ಅಭಿಯಾನವು 2023 ಜನವರಿ 1 ರಿಂದ ಜನವರಿ 10 ರವರೆಗೆ ನಡೆಯಲಿರುವುದು. 12 ವರ್ಷ ದಿಂದ 32 ವರ್ಷ ವಯಸ್ಸಿನವರೆಗೆ ಎಸ್ ಎಸ್ ಎಫ್ ಸದಸ್ಯತ್ವದ ಅವಧಿಯಾಗಿದೆ. 32 ವರ್ಷದಿಂದ 47 ರವರೆಗೆ ಎಸ್ ವೈ ಎಸ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಪಡೆಯಲು 47 ವರ್ಷ ಮೇಲ್ಪಟ್ಟವರಾಗಿರಬೇಕು .ಸದಸ್ಯತನ ನಡೆಸಿದ ಪ್ರತೀ ಮೊಹಲ್ಲಾಗಳಲ್ಲಿ ಯುನಿಟ್ ಸಮಿತಿಯನ್ನು ಅಸ್ತಿತ್ವಕ್ಕೆ ತರುವುದು.ಇದರ ಕಾಲಾವಧಿಯು 2023 ಜನವರಿ 11 ರಿಂದ 22 ಆಗಿರುವುದು.ಸದಸ್ಯತ್ವ ಪಡೆದ ಎಲ್ಲರೂ ಯುನಿಟ್ ಸಮಿತಿಯ ಸಾಮಾನ್ಯ ಸದಸ್ಯರಾಗಿರುವರು.ಯುನಿಟ್ ಸಮಿತಿಗಳ ಮೇಲ್ಘಟಕವಾಗಿ ನೂತನ ವ್ಯವಸ್ಥೆ ಯಂತೆ ಸರ್ಕಲ್ ಸಮಿತಿ ಅಸ್ತಿತ್ವಕ್ಕೆ ಬರುವುದು. ಸಂಘಟನೆಯ ವಿವಿಧ ಘಟಕಗಳಾಗಿ ಝೋನ್,ತಾಲೂಕು,ಜಿಲ್ಲಾ,ರಾಜ್ಯ ಸಮಿತಿ ಇರುವುದು. …..
ಆದುದರಿಂದ ಎಲ್ಲಾ ಘಟಕಗಳ ವ್ಯಾಪ್ತಿ ಯಲ್ಲಿ ವ್ಯಾಪಕವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಸಂಯುಕ್ತ ಸದಸ್ಯತನ ನಡೆಸಲು ವಿನಂತಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಸುಫ್ ಯಾನ್ ಮದನಿ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಎಂ ವೈ ಹಫೀಳ್ ಸ ಅದಿ ಕೊಡಗು,ಎಸ್ ಎಸ್ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.