ಅಮ್ರೋಹ (ವಿಶ್ವ ಕನ್ನಡಿಗ ನ್ಯೂಸ್) : ಹೆರಿಗೆಯ ವೇಳೆ ಮಹಿಳೆಯ ಹೊಟ್ಟೆಯೊಳಗೆ ಟವೆಲ್ ಅನ್ನು ವೈದ್ಯರು ಮರೆತಿದ್ದಾರೆ. ಉತ್ತರ ಪ್ರದೇಶದ ಅಮ್ರೋಹದ ಬನ್ಸ್ ಖೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಖ್ಯ ವೈದ್ಯಾಧಿಕಾರಿ ರಾಜೀವ್ ಸಿಂಘಾಲ್ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಅಮ್ರೋಹಾದಲ್ಲಿರುವ ನೌಗವಾನಾ ಸಾದತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಸೈಫ್ ನರ್ಸಿಂಗ್ ಹೋಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಸಿಎಂಒ ಪ್ರಕಾರ, ಡಾ ಮತ್ಲುಬ್ ಎಂಬ ವೈದ್ಯರು ಶಸ್ತ್ರಚಿಕಿತ್ಸೆಯ ನಂತರ ನಸ್ರಾನಾ ಎಂಬ ಮಹಿಳೆಯ ಹೊಟ್ಟೆಯೊಳಗೆ ಟವೆಲ್ ಬಿಟ್ಟಿದ್ದಾರೆ. ಬಳಿಕ ಯುವತಿಗೆ ಹೊಟ್ಟೆನೋವು ಕಾಣಿಸಿಕೊಂಡಾಗ, ಹೊರಗಿನ ಚಳಿಯಿಂದಾಗಿ ಎಂದು ವೈದ್ಯರು ಉತ್ತರಿಸಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ಯುವತಿಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಂತರ ಆಕೆಯ ಪತಿ ಶಂಸೀರ್ ಅಲಿ ನಸ್ರಾನಾ ಅವರನ್ನು ಅಮ್ರೋಹಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹೊಟ್ಟೆಯೊಳಗೆ ಟವೆಲ್ ಇರುವುದು ಪತ್ತೆಯಾಗಿದೆ. ಬಳಿಕ ಶಸ್ತ್ರ ಚಿಕಿತ್ಸೆ ಮಾಡಿ ಟವೆಲ್ ತೆಗೆಯಲಾಗಿತ್ತು.
ಡಾ ಮತ್ಲುಬ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಅಲಿ ಸಿಎಂಒಗೆ ದೂರು ನೀಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರವಷ್ಟೇ ಹೆಚ್ಚಿನ ವಿವರಗಳನ್ನು ನೀಡಬಹುದು ಎಂದು ಸಿಎಂಒ ಸಿಂಘಾಲ್ ಮಂಗಳವಾರ ಹೇಳಿದ್ದಾರೆ.ಆದರೆ, ಶಂಸೀರ್ ಅಲಿ ಅವರು ಈ ಬಗ್ಗೆ ಲಿಖಿತ ದೂರು ದಾಖಲಿಸಿಲ್ಲ, ತನಿಖೆ ನಡೆಸಲಾಗುವುದು ಎಂದು ಸಿಎಂಒ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.