(www.vknews.in) ದಿನಾಂಕ 26.01.2023 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ನಮ್ಮ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ “ಉಸ್ಮಾನ್- ಶೀಬಾ” ದಂಪತಿ ಪುತ್ರನಾದ ಮೊಹಮ್ಮದ್ ನಿಶ್ವಾನ್ ಆಯ್ಕೆಯಾಗಿರುತ್ತಾರೆ.ಪ್ರಸ್ತುತ ಮಂಗಳೂರಿನ ಯೇನೆಪೋಯ ಯೂನಿವರ್ಸಿಟಿ ಯಲ್ಲಿ CMA USA With Bcomವ್ಯಾಸಂಗ ಮಾಡುತ್ತಿರುವ ಇವರು ರಾಜಸ್ಥಾನದಲ್ಲಿ ನಡೆದ ನ್ಯಾಷನಲ್ ಯೂಥ್ ಪಾರ್ಲಿಮೆಂಟ್ ಇದರ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ಇವರು ಇನ್ನಷ್ಟು ಸಾಧನೆಯ ಶಿಖರವನ್ನು ಏರಲಿ ಎಂದು ಶುಭಕೋರುತ್ತಿದ್ದೇವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.