ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್) : ದೆಹಲಿಯ ಘಟನೆಯಂತೆಯೇ ಉತ್ತರ ಪ್ರದೇಶದ ನೋಯ್ಡಾದಲ್ಲಿಯೂ ಘಟನೆ ನಡೆದಿದೆ. ಬೈಕ್ಗೆ ಕಾರು ಡಿಕ್ಕಿ ಹೊಡೆದು ಅರ್ಧ ಕಿಲೋಮೀಟರ್ ಎಳೆದೊಯ್ದ ಪರಿಣಾಮ ಡೆಲಿವರಿ ಏಜೆಂಟ್, ಬೈಕ್ ಸವಾರ ಮೃತಪಟ್ಟಿದ್ದಾನೆ.
ನೋಯ್ಡಾ ಸೆಕ್ಟರ್ 14ರ ಫ್ಲೈಓವರ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಹೊಸ ವರ್ಷದ ಮುನ್ನಾದಿನದಂದು ಆಹಾರ ವಿತರಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಆನ್ಲೈನ್ ಫುಡ್ ಡೆಲಿವರಿ ಆಪ್ ಸ್ವಿಗ್ಗಿಯ ಉದ್ಯೋಗಿ ಕೌಶಲ್ ಸಾವನ್ನಪ್ಪಿದ್ದಾರೆ.
ಈ ವೇಳೆ ಕೌಶಲ್ ಪ್ರಯಾಣಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಕೌಶಲ್ ಅವರನ್ನು ಸುಮಾರು 500 ಮೀಟರ್ ಎಳೆದೊಯ್ದ ನಂತರ ಕಾರು ನಿಂತಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಘಟನೆ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಭಾನುವಾರ ಬೆಳಗಿನ ಜಾವ 1 ಗಂಟೆಯ ನಂತರ ಕೌಶಲ್ ನಾಪತ್ತೆಯಾದಾಗ ಆತನ ಸಹೋದರ ಅಮಿತ್ ಕರೆ ಮಾಡಿದ್ದ. ಈ ಘಟನೆಯನ್ನು ದಾರಿಹೋಕರೊಬ್ಬರು ಫೋನ್ ನಲ್ಲಿ ಸೆರೆಹಿಡಿದಿದ್ದರು. ಸಹೋದರನ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೆಹಲಿಯಲ್ಲಿ ಅಂಜಲಿಯನ್ನು ಕಾರಿನಲ್ಲಿ ಎಳೆದೊಯ್ದು ಸಾಯಿಸಿದ ಗಂಟೆಗಳ ನಂತರ, ನೋಯ್ಡಾದಲ್ಲಿ ಅಂತಹುದೇ ಘಟನೆ ನಡೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.