(www.vknews.in) : ಪುತ್ತೂರಿನ ಜನಪ್ರಿಯ ಉದ್ಯಮಿ, ಬಡವರ ಬಂಧು, ರೈ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಶ್ರೀ ಆಶೋಕ್ ಕುಮಾರ್ ರೈ ಯವರನ್ನು ಕಾಂಗ್ರೆಸಿಗೆ ಸೇರ್ಪಡೆಗೊಳಿಸಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಲ್ಲಿ ಆಶೋಕ್ ರೈ ಯವರಿಗೆ ಟಿಕೇಟು ನೀಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿರುವ ಕುರಿತು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿದೆ.
ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಅಸಂಖ್ಯಾತ ಬಡ ಬಗ್ಗರಿಗೆ, ನಿರ್ಗತಿಕರಿಗೆ, ದೀನ ದಲಿತರಿಗೆ ಸಹಾಯ ಹಸ್ತ ನೀಡಿರುವ ಶ್ರೀ ಆಶೋಕ್ ರೈ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿನಿಂದ ಸ್ಪಧಿ೯ಸಲೇ ಬೇಕೆಂದು ದುಂಬಾಲು ಬಿದ್ದಿರುವ ಕ್ಷೇತ್ರ ವ್ಯಾಪ್ತಿಯ ಮತದಾರರು ಹಾಗೂ ಪಕ್ಷದ ಹೈಕಮಾಂಡ್ ಆಶೋಕ್ ರೈ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದು, ಪುತ್ತೂರನ್ನು ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇವರೇ ಸೂಕ್ತರೆಂದು ಮನಗಂಡಿದ್ದಾರೆ.
ಆಶೋಕ್ ರೈ ಜೊತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಎರಡು ಸುತ್ತಿನ ಮಾತುಕತೆ ಮುಗಿಸಿದ್ದು, ಇದು ಕೆಲ ದುಷ್ಟ ರಾಜಕಾರಣಿಗಳಿಗೆ ಸವಾಲಾಗಿ ಪರಿಣಮಿಸಿದೆ. ಆಶೋಕ್ ರೈ ಅಭಿಮಾನಿಗಳು ಹಾಗೂ ಹಿತೈಷಿಗಳು ಈಗಾಗಲೇ ಸರಣಿ ಚಿಂತನಾ ಸಭೆ ನಡೆಸಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸಿದ್ದಾರೆ ಎನ್ನಲಾಗಿದೆ. ಬ್ಲಾಕ್ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಬೆಂಬಲದೊಂದಿಗೆ ವಾರದೊಳಗೆ ಆಶೋಕ್ ರೈ ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸಿಗೆ ಸೇರ್ಪಡೆಗೊಳಿಸುವ ಕುರಿತು ಚಚಿ೯ಸಲಾಗಿದೆ ಎಂದು ತಿಳಿದಿದೆ. ಈ ಬಗ್ಗೆ ಹೈಕಮಾಂಡ್ ಅಂತಿಮ ನಿಧಾ೯ರ ಕೈಗೊಂಡಿದೆ ಎನ್ನಲಾಗಿದ್ದು, ಪುತ್ತೂರಿನ ಕಾಂಗ್ರೆಸ್ ಟಿಕೇಟು ಆಶೋಕ್ ರೈ ಗೆ ಖಚಿತವೆನ್ನಲಾಗಿದೆ.
ಪುತ್ತೂರಲ್ಲಿ ಅಭಿವೃದ್ಧಿ ಪರ, ಸಾಮಾಜಿಕ ನ್ಯಾಯದ ಪರ ಹಾಗೂ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನೀಡಲು ಆಶೋಕ್ ರೈ ಯವರಿಂದ ಮಾತ್ರ ಸಾಧ್ಯ ಎಂದು ಈಗಾಗಲೇ ಅವರು ಮಾಡಿದ ಜನಾನುರಾಗಿ ಕೆಲಸಗಳೇ ಅವರಿಗೆ ಜನಪ್ರಿಯತೆ ತಂದು ಕೊಟ್ಟಿರುವುದಕ್ಕೆ ಸಾಕ್ಷಿ. ಈ ಬಗ್ಗೆ ಪುತ್ತೂರು ಕ್ಷೇತ್ರದ ನಾಗರಿಕರು ಚಿಂತಿಸುವುದೊಳಿತು.
– ಶೇಕ್, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.