(www.vknews.in) : ನಿಜವಾದ ಲವ್ ಜಿಹಾದ್ ಪ್ರಯತ್ನ ಶಿವಮೊಗ್ಗ ದಲ್ಲಿ ನಡೆದಿದೆ ಎಂಬುದಕ್ಕೆ ಇವತ್ತು ಬಲವಾದ ಸಾಕ್ಷಿ ಸಿಕ್ಕಿದೆ. ಲವ್ ಜಿಹಾದ್ ಎಂಬ ಬಾಯಿ ಮಾತಿನವರಿಗೆ ಸರಿಯಾದ ಉತ್ತರ ಶಿವಮೊಗ್ಗ ಸುನಿಲ್ ಪ್ರಕರಣದಲ್ಲಿ ಸಿಕ್ಕಿದೆ.
ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವುದು ಬೇರೆ.. ಅದರಿಂದ ತಪ್ಪಿಸಿಕೊಳ್ಳಲು ಭಜರಂಗದಳ ನಾಯಕನ ಮೇಲೆ ತಲುವಾರು ದಾಳಿ ಎಂಬ ಕಥೆ ಕಟ್ಟುವುದು ಬೇರೆ. ಅದರಿಂದ ರಾಜಕೀಯ ಲಾಭ ಪಡೆಯಲು ಬಂದ್ ಗೆ ಕರೆ ನೀಡುವುದು ಬಲವಂತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸುವುದು ಬೇರೆ.
“ಆದರೆ ಮೆಚ್ಚಲೇಬೇಕಾದದ್ದು ಅಲ್ಲಿಯ ಪೋಲೀಸ್ ಅಧಿಕಾರಿಯನ್ನ, ನೈಜವಾದ ಘಟನೆಯನ್ನು ಕೆಲವೇ ಘಂಟೆಗಳಲ್ಲಿ ತನಿಖೆ ನಡೆಸಿ ಜನರ ಮುಂದೆ ಸತ್ಯಾಸತ್ಯತೆಯನ್ನು ನೀಡಿದವರಿಗೆ ಬಿಗ್ ಸೆಲ್ಯೂಟ್, ಇಲ್ಲಿ ನಮ್ಮ ಅಧಿಕಾರಿಯೇ ಗ್ರೇಟ್”
ಅಧಿಕಾರದ ಆಸೆಗಾಗಿ ಜನರಲ್ಲಿ ದ್ವೇಷ ವನ್ನು ಹುಟ್ಟು ಹಾಕಿ ಗಲಬೆ ಎಬ್ಬಿಸಿ ರಾಜಕೀಯ ಕುರ್ಚಿ ಗಾಗಿ ನಡೆಯುವ ಎಲ್ಲಾ ಕುತಂತ್ರ ಗಳನ್ನು ಜನತೆ ಅರಿಯಬೇಕು. ಯಾವುದೇ ಘಟನೆಯ ಸತ್ಯತೆ ಮೊದಲು ತಿಳಿಯಬೇಕು. ಇನ್ನೂ ಚುನಾವಣೆ ಮುಗಿಯುವ ತನಕ ಬಾರೀ ಜಾಗ್ರತೆ ವಹಿಸಬೇಕು.
✍️ ಅಶ್ರಫ್ ಕಿನಾರ, ಮಂಗಳೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.