ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್) : ರಜೆ ಸಿಗದ ಕಾರಣ ಹೆಂಡತಿ ಸಿಟ್ಟಾಗಿದ್ದಾಳೆ, ದಯವಿಟ್ಟು ನನಗೆ ರಜೆ ಕೊಡಿ ಎಂದು ಪೊಲೀಸ್ ಕಾನ್ಸ್ ಸ್ಟೇಬಲ್ ಓರ್ವರು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಇಲಾಖೆಯಲ್ಲಿ ನಿರ್ದಿಷ್ಟವಾದ ರಜೆಗಳಿದ್ದು, ಹೆಚ್ಚು ರಜೆಗಳು ಸಿಗುವುದು ಕಷ್ಟಕರವಾಗಿದೆ.
ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಕಾನ್ಸ್ ಸ್ಟೇಬಲ್, ಬಳಿಕ ಸರಿಯಾದ ರಜೆಯಿಲ್ಲದೆ ಕೆಲಸಕ್ಕೆ ಹಾಜರಾಗಿದ್ದರು. ಹೆಂಡತಿಯ ಬಳಿ ಸಂಬಂಧಿಕರ ಹುಟ್ಟು ಹಬ್ಬಕ್ಕೆ ಬರುತ್ತೇನೆ ಎಂದು ಭರವಸೆ ಕೊಟ್ಟು ಕೆಲಸಕ್ಕೆ ಬಂದಿರುವ ಕಾನ್ಸ್ ಸ್ಟೇಬಲ್ ಗೆ ರಜೆ ಸಿಗಲಿಲ್ಲ, ಈ ವಿಷಯವನ್ನು ಹೆಂಡತಿಯ ಬಳಿ ಹೇಳಿದ ಬಳಿಕ ಹೆಂಡತಿ ಗಂಡನ ಬಳಿ ಸಿಟ್ಟಾಗಿ ಮಾತು ಬಿಟ್ಟಿದ್ದಾಳೆ.
ಇದರಿಂದಾಗಿ ರಜೆಗಾಗಿ ಏನು ಮಾಡುವುದೆಂದು ಯೋಚನೆ ಮಾಡಿ ಕೊನೆಗೆ ಮೇಲಾಧಿಕಾರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ನನಗೆ ರಜೆ ಬೇಕು, ಪತ್ನಿ ಸಿಟ್ಟಾಗಿದ್ದಾಳೆ. ಅವಳ ಬಳಿ ರಜೆ ತೆಗೆದುಕೊಂಡು ಬರುತ್ತೇನೆ ಎಂದಿದ್ದೆ. ರಜೆ ಸಿಗದ ಕಾರಣ ಅವಳು ನನ್ನ ಫೋನಿಗೂ ಪ್ರತಿಕ್ರಿಯಿಸುತ್ತಿಲ್ಲ. ನನ್ನ ಬಳಿ ಮಾತು ಬಿಟ್ಟಿದ್ದಾಳೆ. ದಯವಿಟ್ಟು ನನಗೆ ರಜೆ ಕೊಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನು ನೋಡಿದ ಮೇಲಾಧಿಕಾರಿ ಐದು ದಿನಗಳ ರಜೆಯನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾನ್ಸ್ ಸ್ಟೇಬಲ್ ಮೇಲಾಧಿಕಾರಿಗೆ ಬರೆದ ಪತ್ರ ವೈರಲ್ ಆಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.