(www.vknews.in) ನಾನು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಹಾಗೂ ಕೇಂದ್ರ ಸಚಿವರಾದ ಸನ್ಮಾನ್ಯ ಪ್ರಲ್ಹಾದ ಜೋಶಿ ಅವರಲ್ಲಿ ಮತ್ತು ಸಮಸ್ತ ಶಾಸಕರಲ್ಲಿ ಉತ್ತರ ಕರ್ನಾಟಕದ ಯಾವತ್ತೂ ಜನತೆಯ ಪರವಾಗಿ ವಿನಂತಿಸುವುದೇನೆಂದರೆ, ಧಾರವಾಡದ ಈ ಯುವ ಪ್ರತಿಭಾನ್ವಿತ ಕಲಾವಿದ ಕು. ವಿನಾಯಕ ಹಿರೇಮಠ ಖುದ್ದಾಗಿ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರನ್ನು ಭೇಟಿ ಮಾಡಿ ಈ ಅಪೂರ್ವ ಕಲಾಕೃತಿಯನ್ನು ಸಮರ್ಪಣೆ ಮಾಡಲು ಅವಕಾಶ ಕಲ್ಪಿಸಬೇಕು…
“ನೀನೊಲಿದರೆ ಕೊರಡು ಕೊನರುವುದಯ್ಯ…” ಎಂಬ ಶರಣ ವಾಣಿಯಂತೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ಗಣ್ಯರಿಗೆ ಹಾಗೂ ಪ್ರಜಾಪ್ರತಿನಿಧಿಗಳಿಗೆ ಅನ್ವಯಿಸುವ ಎಲ್ಲ ರಕ್ಷಣಾತ್ಮಕ ಶಿಷ್ಟಾಚಾರದ ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿನಾಯಕ ಹಿರೇಮಠ ಅವನಿಗೂ ನಿಖರ ನಿಯಮಗಳನ್ನು ಸೂಚಿಸಿ ಈ ರಾಷ್ಟ್ರೀಯ ಯುವಜನೋತ್ಸವದಲ್ಲಿ ಓರ್ವ ಪ್ರತಿಭಾನ್ವಿತ ಯುವ ಕಲಾವಿದನಿಗೂ ಅವಕಾಶ ನೀಡಿದರೆ, ಈ ಯುವ ಪ್ರತಿಭೆಯು ಭಾರತದ ಉತ್ಕೃಷ್ಟ ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಮತ್ತೊಬ್ಬ “ಮರಿ ಜಕಣಾಚಾರಿ” ಅವರು ದೇಶಕ್ಕೆ ಪರಿಚಯವಾಗಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಎಲ್ಲರೂ ಒಕ್ಕೊರಲಿನಿಂದ ಕಲಾ ಪೋಷಣೆಯ ಒತ್ತಾಸೆಯಿಂದ ಮತ್ತು ಉತ್ತರ ಕರ್ನಾಟಕದ ರಾಜಕೀಯ ಇಚ್ಛಾಶಕ್ತಿಯನ್ನು ಬಳಕೆ ಮಾಡಿ ಶ್ರಮಿಸಿದರೆ ಎಲ್ಲವೂ ಸಾಧ್ಯವಾಗುತ್ತದೆ. ಮತ್ತೆ ಒಂದು ಮಾತು ಸತ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಈ ಕಲಾವಿದನ ಈ ಉನ್ನತ ಕಲೆಯನ್ನು ಕಂಡು ಆನಂದತುಂದಿಲಗೊಂಡು ವಿನಾಯಕನ ಬೆನ್ನುತಟ್ಟಿ ಪ್ರೋತ್ಸಾಹಿಸುವುದಂತೂ ನಿಜ. ಇದರಿಂದ ಧಾರವಾಡ-ಹುಬ್ಬಳ್ಳಿಯ ಜನಮಾನಸ ಹೆಮ್ಮೆಪಟ್ಟುಕೊಳ್ಳುವಂತಾಗುತ್ತದೆ. ದಯವಿಟ್ಟು ಎಲ್ಲರೂ ಪ್ರಯತ್ನಿಸಿ ಅವಕಾಶ ಒದಗಿಸಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
ಗುರುಮೂರ್ತಿ ಯರಗಂಬಳಿಮಠ, ನಿವೃತ್ತ ಸಂಪಾದಕ, “ಜೀವನ ಶಿಕ್ಷಣ” ಮಾಸಪತ್ರಿಕೆ ಧಾರವಾಡ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.