ಮೌಲ್ಯ ಶಿಕ್ಷಣ ಕುರಿತು ಸರ್ಕಾರಕ್ಕೆ ಧಾರ್ಮಿಕ ಗುರುಗಳು ನೀಡಿರುವ ಸಲಹೆಗಳು..
ಇದರ ಆಧಾರದ ಮೇಲೆ ಕೆಲವು ಪರಿವರ್ತನೆಯ ಪ್ರಶ್ನೆಗಳು ಹುಟ್ಟುತ್ತವೆ..
ಹಾಗಾದರೆ ನೈತಿಕ ಶಿಕ್ಷಣ ಬೇಕಾಗಿರುವುದು ಯಾರಿಗಾಗಿ..
(www.vknews.in) ; ಮೇಲಿನ ಎಲ್ಲರೂ ಹೇಳಿರುವುದು ಮೌಲ್ಯಗಳನ್ನು ಶಿಕ್ಷಣದಲ್ಲಿ ಬೋದನೆ ಮಾಡಿ ಎಂದು. ಆದರೆ ವಾಸ್ತವವಾಗಿ ಮೌಲ್ಯಗಳು ಇರುವುದು ಬೋದನೆ ಮಾಡಲು ಅಲ್ಲ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸಲು. ಆಗ ಸಹಜವಾಗಿ ವಿದ್ಯಾರ್ಥಿಗಳು ಅದನ್ನು ಅನುಸರಿಸುತ್ತಾರೆ..
ಮುಖವಾಡಗಳ ಮರೆಯಲ್ಲಿ ಕೇವಲ ಬೋಧನೆ ಮಾಡಿದರೆ ಅದು ವ್ಯರ್ಥ..
ಇಡೀ ಜಗತ್ತಿನ ನೈತಿಕ ಪ್ರಜ್ಞೆಗೆ ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುವವರು ಮಹಾತ್ಮ ಗಾಂಧಿ ಮತ್ತು ಗೌತಮ ಬುದ್ಧ, ಸಾಮಾಜಿಕ ಪ್ರಜ್ಞೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರು, ಸಾಂಸ್ಕೃತಿಕ ಪ್ರಜ್ಞೆಗೆ ಸ್ವಾಮಿ ವಿವೇಕಾನಂದರು….
ಅದನ್ನು ಪ್ರಾಮಾಣಿಕವಾಗಿ ಬೋದಿಸದೆ ಕೇವಲ ಕಪಟ ನಾಟಕವಾಡಿದರೆ ಪ್ರಯೋಜನವೇನು..
ಆ ಹೇಳಿಕೆಗಳ ಪಟ್ಟಿಯಲ್ಲಿ ಇರುವ ಕೆಲವರು ಆಂತರ್ಯದಲ್ಲಿ ನಾಥುರಾಂ ಘೋಡ್ಸೆ ಆರಾಧಕರು. ಆಹಾರ ಸ್ವಾತಂತ್ರ್ಯ ಗೌರವಿಸದ ಸರ್ವಾಧಿಕಾರಿಗಳು. ತುಪ್ಪ ಮತ್ತು ಮಾಂಸದ ವ್ಯತ್ಯಾಸವನ್ನು ಸ್ವಾರ್ಥಕ್ಕಾಗಿ ಮರು ವ್ಯಾಖ್ಯಾನಿಸುವವರು….
ಭ್ರಷ್ಟಾಚಾರದ ಮೂಲವೇ ರಾಜಕಾರಣಿಗಳಾಗಿರುವಾಗ ಅವರ ಆಡಳಿತದಲ್ಲಿ ನಡೆಯುವ ಶಾಲೆಗಳಲ್ಲಿ ನೈತಿಕ ಶಿಕ್ಷಣ ಬೋದಿಸಿದರೆ ಅದರ ಪರಿಣಾಮ ಏನಾಗಬಹುದು….
ಇವತ್ತು ಈ ದೇಶದ ಮಾನವೀಯ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕಾಗಿದ್ದ ಧಾರ್ಮಿಕ ಮುಖಂಡರು ಅದಕ್ಕೆ ವಿರುದ್ಧ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಾ, ರಾಜಕೀಯ ಗುಲಾಮರಾಗಿ, ಸಿರಿವಂತಿಕೆ ಪ್ರದರ್ಶಿಸುತ್ತಾ ನೈತಿಕತೆಯನ್ನೇ ಮರೆತವರು ನೈತಿಕ ಶಿಕ್ಷಣದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುತ್ತಾರೆ.
ತಮ್ಮ ತಮ್ಮ ಧರ್ಮಗಳ ಸಾರವನ್ನು ಸಂವಿಧಾನದ ಅಡಿಯಲ್ಲಿ ವಿಲೀನಗೊಳಿಸಿ ಬೃಹತ್ ವೈವಿಧ್ಯಮಯ ದೇಶದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ಜವಾಬ್ದಾರಿ ನಿರ್ವಹಿಸದೆ ಸಸ್ಯಹಾರ – ಮಾಂಸಾಹಾರದ ಬಗ್ಗೆ ಪಾಠ ಮಾಡುತ್ತಾರೆ. ದೇಶವನ್ನು ಪ್ರೀತಿಸದೆ ಧರ್ಮದ ಬಗ್ಗೆ ಮಾತನಾಡುತ್ತಾರೆ.
ಇವರು ನೈತಿಕತೆಯ ಸಲಹೆ ನೀಡುವವರು…..
” ನುಡಿದಂತೆ ನಡೆ ” ಅದೇ ನೈತಿಕ ಮೌಲ್ಯ…
” ನನ್ನ ಜೀವನವೇ ನನ್ನ ಸಂದೇಶ ” ಅದೇ ನೈತಿಕತೆಯ ಪಾಠ….
ನೈತಿಕತೆ ತಿಳಿವಳಿಕೆಯಲ್ಲ – ನಡವಳಿಕೆ…
ಎಲ್ಲಾ ಧರ್ಮಗಳ ಧಾರ್ಮಿಕ ಮುಖಂಡರೆ ಇದನ್ನು ಅರ್ಥಮಾಡಿಕೊಳ್ಳಿ ಮತ್ತು ಅನುಸರಿಸಿ…
ಇದು ಪ್ರೀತಿಯ ಪ್ರಜ್ಞಾ ಪೂರ್ವಕ ಮನವಿ……
– ವಿವೇಕಾನಂದ ಎಚ್. ಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.