ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಜನವರಿ 4ರಂದು ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟು ನಿವಾಸಿ ವಿವೇಕಾನಂದ ಯಾನೆ ಸತ್ಯನಾರಾಯಣ ಅವರ ಬಾಡಿಗೆ ಮನೆಯಿಂದ ಸುಮಾರು 75 ಸಾವಿರ ಮೌಲ್ಯದ ವಿವಿಧ ವಸ್ತುಗಳನ್ನು ಕಳವುಗೈದ ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಕೂರ್ನಡ್ಕ ನಿವಾಸಿ ಮಹಮ್ಮದ್ ಮುಸ್ತಫ್ಪ, ಸವಣೂರು ಚಾಪಳ್ಳ ನಿವಾಸಿ ಶಮೀರ್ ಬಂಧಿತರು.
ತಾಯಿಯ ಅಸೌಖ್ಯತೆ ಹಿನ್ನಲೆಯಲ್ಲಿ ವಿವೇಕಾನಂದ ಯಾನೆ ಸತ್ಯನಾರಾಯಣ ಅವರು ಸ್ವಂತ ಊರಾದ ಮಧುರೈಗೆ ಬಾಡಿಗೆ ಮನೆಗೆ ಬೀಗ ಹಾಕಿ ಅವರಲ್ಲಿದ್ದ ಒಂದು ಜೊತೆ ಬೀಗದ ಕೀಯನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ನಲ್ಲಿಟ್ಟು, ಇನ್ನೊಂದು ಜೊತೆ ಕೀಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು. ಜನವರಿ 8 ರಂದು ಮರಳಿ ಬಂದು ನೋಡಿದಾಗ ಮನೆಯ ಬೀಗ ಯಥಾ ಸ್ಥಿತಿಯಲ್ಲಿದ್ದು, ಒಳಗಡೆ ಚಾವಡಿ ಮತ್ತು ಬೆಡ್ ರೂಮ್ ನ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿಯಾಗಿದ್ದುದಲ್ಲದೇ ಮನೆಯಲ್ಲಿದ್ದ 18ಸಾವಿರ ನಗದು ಸೇರಿದಂತೆ ಇತರ ವಸ್ತುಗಳನ್ನು ಕಳವುಗಯ್ಯಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.