ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ವೇಳೆ ಭದ್ರತಾ ಲೋಪ. ವಾಹನ ರ ್ಯಾಲಿ ವೇಳೆ 15 ವರ್ಷದ ಬಾಲಕ ಮೋದಿ ಬಳಿ ಹಾರ ಹಿಡಿದುಕೊಂಡು ಓಡಿ ಬಂಡ ಘಟನೆ ನಡೆದಿದೆ. ಕರ್ನಾಟಕದ ಹುಬ್ಬಳ್ಳಿಯಲ್ಲಿ ಭದ್ರತಾ ಲೋಪ ಸಂಭವಿಸಿದೆ. ಮೋದಿ ಬಳಿ ಬಂದ ಬಾಲಕನನ್ನು ತಕ್ಷಣ ಭದ್ರತಾ ಸಿಬ್ಬಂದಿ ಕರೆದೊಯ್ದಿದ್ದಾರೆ.
29ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಪ್ರಧಾನಿ ಹುಬ್ಬಳ್ಳಿಗೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಸಮಾರಂಭ ನಡೆದ ರೈಲ್ವೆ ಕ್ರೀಡಾ ಮೈದಾನದವರೆಗೆ ಪ್ರಧಾನಿಯವರ ರೋಡ್ ಶೋ ಇತ್ತು. ವಾಹನದ ಫುಟ್ಬೋರ್ಡ್ನಿಂದ ಪ್ರಧಾನಿ ತಮ್ಮ ಎಂದಿನ ಶೈಲಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಬಾಲಕ ಬ್ಯಾರಿಕೇಡ್ ಮೇಲೆ ಹಾರಿ, ಹೂವಿನ ಹಾರದೊಂದಿಗೆ ಭದ್ರತಾ ಸಿಬ್ಬಂದಿಯನ್ನು ದಾಟಿ ಪ್ರಧಾನಿಯವಾರ ಬಳಿ ತಲುಪಿದನು. ಅಪಾಯವನ್ನು ಗ್ರಹಿಸಿದ ಭದ್ರತಾ ಸಿಬ್ಬಂದಿ ತಕ್ಷಣ ಬಾಲಕನನ್ನು ಕರೆದೊಯ್ದರು. ಅಷ್ಟರಲ್ಲಾಗಲೇ ಬಾಲಕ ಪ್ರಧಾನಿಯವರ ಕೈಗೆ ಹಾರ ನೀಡಿದ್ದನು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.