ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಸೌದಿ ಅರೇಬಿಯಾ ಭಾನುವಾರದವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಮಕ್ಕಾ, ಅಸಿರ್, ಅಲ್ ಬಹಾ, ಜಝಾನ್ ಮೊದಲಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಶುಕ್ರವಾರದಂದು ಮಕ್ಕಾ, ರಿಯಾದ್ ಮತ್ತು ಪೂರ್ವ ಪ್ರಾಂತ್ಯದಂತಹ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ, ಕಾಸಿಮ್, ಹೈಲ್, ಉತ್ತರ ಗಡಿ ಪ್ರದೇಶ, ಅಲ್ ಜೌಫ್, ತಬೂಕ್ ಮತ್ತು ಮದೀನಾ ಪ್ರದೇಶಗಳಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಗಡಿ ಪ್ರದೇಶ, ಅಲ್ ಜೌಫ್, ತಬೂಕ್, ಹೈಲ್ ಮತ್ತು ಮದೀನಾದ ಉತ್ತರ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ತಾಪಮಾನವು ಕಡಿಮೆಯಾಗುತ್ತದೆ. ಪ್ರದೇಶದಲ್ಲಿ ಚಳಿ ಇರುತ್ತದೆ. ಮಳೆಯಿಂದ ಆಗುವ ಅವಘಡಗಳನ್ನು ತಪ್ಪಿಸಲು ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.