(www.vknews.in) ; ಇದೀಗ ಸೋಶಿಯಲ್ ಮೀಡಿಯಾಗಳಲ್ಲೂ ಇತರ ಮಾಧ್ಯಮಗಳಲ್ಲೂ ಬಹಳ ಪ್ರಚಾರದಲ್ಲಿರುವ ಇನಾಯತ್ ಅಲಿಯವರನ್ನು ಇಂದು ಅನಿರೀಕ್ಷಿತವಾಗಿ ಕೆ.ಸಿ. ರೋಡಿನ ಒಂದು ಮಸ್ಜಿದ್ ನಲ್ಲಿ ಕಾಣಲು ಸಾಧ್ಯವಾಯಿತು. ಸುಮಾರು ಎರಡು ದಶಕಗಳ ಹಿಂದೆ ಅವರನ್ನು ಮೊದಲು ಭೇಟಿಯಾದುದು ಕೂಡಾ ಮಂಗಳೂರಿನ ಒಂದು ಮಸ್ಜಿದ್ ನಲ್ಲಾಗಿತ್ತು. ಆಗ ಅವರು NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಸ್ಕರ್ ಫೆರ್ನಾಂಡೀಸರ ಆಪ್ತರಾಗಿ ಕಾಂಗ್ರೆಸ್ನ ಕಟ್ಟಾಳುವಾಗಿ, ಸಮಾಜ ಸೇವಕರಾಗಿ ಮಿಂಚುತ್ತಿದ್ದ ಅವರು ಆಗ ಸುಂದರ, ಸ್ಪುರದ್ರೂಪಿ ತರುಣ. ಇದೀಗ ಎರಡು ದಶಕಗಳು ಕಳೆದರೂ ಹಾಗೆಯೇ ಇದ್ದಾರೆ ಎಂದನ್ನಿಸಿತು. ಅದೇ ಲವಲವಿಕೆ, ಅದೇ ಶಾಂತ ಸ್ವಭಾವ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವರು ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ವ್ಯಕ್ತಿತ್ವ ನೋಡಿ ಮತ ಹಾಕುವುದಾದರೆ ಖಂಡಿತ ಇವರು ಶಾಸಕರಾಗಲು ಯೋಗ್ಯ ವ್ಯಕ್ತಿ. ಕಾರಣ, ಜನಸೇವೆ ಇವರ ರಕ್ತಗತ ಗುಣ. ಸದ್ದು, ಸುದ್ದಿ ಮಾಡದೆ ಪಲಾನುಭವಕ್ಕೆ ಅರ್ಹತೆ ನೋಡಿ ದಾನ ಮಾಡುತ್ತಾ ಬಂದಿದ್ದಾರೆ. ಗುತ್ತಿಗೆದಾರರಾಗಿರುವ ಇವರು ಆರ್ಥಿಕವಾಗಿಯೂ ಸ್ಥಿತಿವಂತರು. ಸದಾ ಹಸನ್ಮುಖರಾಗಿ ಜಾತಿಮತ, ಪಕ್ಷ ನೋಡದೆ ಜನಸೇವೆ ಮಾಡುತ್ತಾ ಬೆಳೆದು ಬಂದಿದ್ದಾರೆ. ಅದೂ ಪ್ರತಿಫಲಾಪೇಕ್ಷೆ ಇಲ್ಲದೆ. ಇಂತಹ ವ್ಯಕ್ತಿಗೆ ಜನಸೇವೆಗೆ ಅಧಿಕೃತ ಸ್ಥಾನ ಸಿಕ್ಕಿದರೆ ಸೇವೆ ಇನ್ನಷ್ಟು ಉಜ್ವಲವಾಗುವುದು ಸಹಜ.
ಸೌಮ್ಯ ಮಾತಿನ ಇನಾಯತ್ ಅಲಿಯವರು ಸ್ವಭಾವದಲ್ಲೂ ಮೃದು. ಸರಳ ಸಜ್ಜನಿಕೆಯ ಮಧುರ ವ್ಯಕ್ತಿತ್ವ. ಇವರು ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಂತಾಗಲಿ ಎಂಬುದು ನನ್ನ ದುಆ ಮತ್ತು ಹಾರೈಕೆ.
– ಡಿ.ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.