ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ) : ಸೇವಂತಿ ಪ್ರೀಯ ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ತಾಲ್ಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು . ದಕ್ಷಿಣ ಕನ್ನಡ ,ಉಡುಪಿ ಜಿಲ್ಲೆ ಸೇರಿದಂತೆ ನಾಡಿನ ಸಹಸ್ರಾರು ಭಕ್ತಾಧಿಗಳು ಆಗಮಿಸಿ ಶ್ರೀ ಬ್ರಹ್ಮ ಲಿಂಗೇಶ್ವರ ದರ್ಶನಕ್ಕೆ ಪಾತ್ರರಾಗಿ ಮಕರ ಸಂಕ್ರಮಣ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವನ್ನು ಕಣ್ತುಂಬಿ ಕೊಂಡರು. ಬೆಳಿಗ್ಗೆನಿಂದಲೇ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳು ಜೊತೆಗೆ ರಾತ್ರಿ ಗೆಂಡ ಸೇವೆ,ಯಕ್ಷಗಾನ ಸೇವೆಯಾಟ ಸಂಪ್ರದಾಯದಂತೆ ನಡೆದವು .ಈ ಬಾರಿ ದೇವಳದ ಅಲಂಕಾರವು ಸೇವಂತಿ ಹೂವುಗಳ ಜೊತೆ ಹಣ್ಣು ಹಂಪಲುಗಳಿಂದ ಕಂಗೊಳಿಸಿತ್ತು. ಎಂದಿನಂತೆ ವಾಹನಗಳಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು . ಶಾಂತಿ ಸುವಸ್ಥೆಗೆ ಕೊಲ್ಲೂರು ಠಾಣೆ ಪೊಲೀಸರು ಕೈ ಜೋಡಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.