ಮಂಗಳೂರು ,(ವಿಶ್ವ ಕನ್ನಡಿಗ ನ್ಯೂಸ್ ):ದೇಶ-ವಿದೇಶಗಳಲ್ಲಿ ಸದ್ದು ಮಾಡಿದ ಕನ್ನಡದ ಹೆಮ್ಮೆಯ ಸಿನಿಮಾ “ಕಾಂತಾರ” ಇದೀಗ ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದೆ. ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇಂದು ಭಾನುವಾರ ಸಂಜೆ 6 ಗಂಟೆಗೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ‘ಕಾಂತಾರ’ ಪ್ರಸಾರವಾಗಲಿದೆ. ಈಗಾಗಲೇ ಯಶಸ್ವಿ 100 ದಿನಗಳ ಪೂರೈಸಿರುವ ಕಾಂತಾರ ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಸ್ಯಾಂಡ್ ಹಾರ್ಟ್ ಕಲಾವಿದರಾದ ಹರೀಶ್ ಆಚಾರ್ಯ ರವರು ಅದ್ಭುತವಾದ ಮರಳುಶಿಲ್ಪ ಕೃತಿಯನ್ನು ರಚಿಸಿದ್ದಾರೆ.ಮಂಗಳೂರಿನ ತಣ್ಣೀರುಬಾವಿ ಕಡಲ ತೀರದ ಮರಳುರಾಶಿಯಲ್ಲಿ ‘ಕಾಂತಾರ’ ಸಿನಿಮಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದರ ಹಿನ್ನಲೆಯಲ್ಲಿ ಮೂಡಿದ ಕಲಾಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸ್ಯಾಂಡ್ ಹಾರ್ಟ್ ಕಲಾವಿದರಾದ ಹರೀಶ್ ಆಚಾರ್ಯ ರವರು ಹೃದಯ ತುಂಬಿ ಈ ಕಲಾಕೃತಿ ರಚಿಸಿದ್ದಾರೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಈ ರೀತಿಯ ಪ್ರಚಾರ ಸಿಕ್ಕಿದೆ .ದಿನವಿಡೀ ಪರಿಶ್ರಮ ಪಟ್ಟು ರಚಿಸಿದ ಈ ಕಲಾಕೃತಿಯಲ್ಲಿ ಪಂಜುರ್ಲಿ ದೈವದ ಮುಖವರ್ಣಿಕೆಯ ಕಲರ್ ಫುಲ್ ಚಿತ್ರಣ ಮೂಡಿಬಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಕಾಂತಾರ’ ಸಿನಿಮಾವು ಪ್ರಸಾರವಾಗುದರ ಕುರಿತು ವಾಹಿನಿಗೆ ಕಲಾವಿದರು ಬರಹದ ಮೂಲಕ ಶುಭ ಕೋರಿದ್ದಾರೆ. ದೇಶದಾದ್ಯಂತ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ’ ಸಿನಿಮಾ ಹದಿನಾರು ಕೋಟಿ ಯಲ್ಲಿ ಚಿತ್ರೀಕರಣ ಗೊಂಡು ಸುಮಾರು400 ಕೋಟಿಗೂ ಅಧಿಕ ಬಜೆಟ್ ನ್ನು ಕಲೆ ಹಾಕಿತ್ತು. ಇತ್ತೀಚಿಗೆ ಅಮೇಸನ್ ಪ್ರೈಮ್ ನಲ್ಲೂ ರೀಲೀಸ್ ಕಂಡು ಜನಮೆಚ್ಚುಗೆ ಪಡೆದಿತ್ತು . ಇನ್ನೂ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಪ್ರಾಜೆಕ್ಟರ್ ಮೂಲಕ ವೂ ತೋರಿಸಲಾಗಿತ್ತು . ಇಂದು ಕಿರುತೆರೆಯಲ್ಲೂ ಬಿಡುಗಡೆ ಗೊಂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.