(www.vknews.in) : ಇತ್ತೀಚೆಗೆ ಚಿಕ್ಕ ಮಂಗಳೂರಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಓರ್ವಳು ಆತ್ಮಹತ್ಯೆ ಮಾಡಿ ಕೊಂಡಿದ್ದು,ತನ್ನ ಸಾವಿಗೆ ಸಂಘ ಪರಿವಾರದ ಓರ್ವ ಯುವ ನಾಯಕ ಹಿತೇಶ್ ಕಾರಣ ಎಂದು ಡೆತ್ ನೋಟ್ ಬರೆದು ಇಟ್ಟಿದ್ದಾಳೆ. ದುಷ್ಕರ್ಮಿ ವಿರುದ್ಧ ಪ್ರಕರಣ ದಾಖಲಿಸಲು ಕೂಡಾ ಪೊಲೀಸರು ತಡ ಮಾಡಿದ್ದಾರೆ. ರಾಜ್ಯದ ಬಿ.ಜೆ.ಪಿ ಯ ರಾಜ್ಯಾಧ್ಯಕ್ಷ ರಾದ ನಳಿನ್ ಕುಮಾರ್ ಕಟೀಲು ರವರು ಇತ್ತೀಚೆಗೆ ಬಹಿರಂಗವಾಗಿ ಮೂಲ ಬೂತ ಸೌಕರ್ಯದ ಪ್ರಶ್ನೆ ಕೇಳಬೇಡಿ,ರಸ್ತೆ ಗುಂಡಿ,ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿಕೆ ನೀಡಿದ್ದರು.
ಇಂದು ರಾಜ್ಯದಲ್ಲಿ ನಳಿನ್ ರವರು ಬಿತ್ತಿದ ಭೀಜದ ಫಸಲು ಬರುತ್ತಾ ಇದೆ. ಸಂಘ ಪರಿವಾರದ ಪುಂಡರು ಸ್ವೇಚ್ಚಂದವಾಗಿ ಕಾನೂನಿನ ಭಯವಿಲ್ಲದೆ, ಎಗ್ಗಿಲ್ಲದ ಯುವತಿಯರ ವಿಷಯದಲ್ಲಿ ಪದ್ಯ ಪ್ರವೇಶಿಸಿ ಅವರ ಖಾಸಗಿತನವನ್ನು ಭಂಗ ಗೊಳಿಸುವುದಲ್ಲದೆ , ಜೀವ ಹಾನಿ ವರೆಗೆ ರಾದ್ದಾಂತ ವನ್ನು ಮುಂದುವರಿಸಿ ಇಂದು ಅದು ದುರಂತದ ವರೆಗೆ ಬಂದು ನಿಂತಿದೆ.
ನಳಿನ್ ಕುಮಾರ ಕಟೀಲು ರವರು ಉಪದೇಶಿಸಿದ ಪಾಠ ಲವ್ ಜಿಹಾದ್ ನಿಂದ ಮೊದಲ್ಗೊಂಡು ನಾರಿ ರಕ್ಷಕರು ಸೃಷ್ಟಿಯಾಗುವ ವರೆಗೆ ಫಸಲು ತೆಗೆಯುತ್ತಿದ್ದು,ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದೆ. ದುಷ್ಕರ್ಮಿ ಹಿತೇಶ್ ನಿಗೆ ಶಿಕ್ಷೆ ಆಗಬೇಕಿದೆ.ನಳಿನ್ ನೈತಿಕ ಹೊಣೆ ಹೊತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ.ಅಂಗಡಿ ಮಳಿಗೆಯಲ್ಲಿ ಮುಸ್ಲಿಮ್ ಯುವಕ ಯುವತಿ ಪರಸ್ಪರ ಮಾತನಾಡಿ ಕೊಂಡರೂ ಎಂದು ತಗಾದೆ ಎಬ್ಬಿಸಿ,ಹಲ್ಲೆ ನಡೆಸಿ ರಾದ್ದಾಂತಗೈದ ಪ್ರಕರಣದಲ್ಲಿ ಹೇಳಿಕೆ ನೀಡಿದ ಶೋಬಕ್ಕ,ಭರತ್, ಪೂಂಜಾಗಳು ಹೀಗೆಲ್ಲಿದ್ದಾರೆ?
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.