ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ನಿನ್ನೆ ಹಾಡುಹಗಲೇ ತಾಲೂಕಿನ ಮುಂಡೂರು ಎಂಬಲ್ಲಿ 23ರ ಹರೆಯದ ಯುವತಿಯನ್ನು ಮನೆಯ ಅಂಗಳದಲ್ಲಿ ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ೦ಧಿತ ಆರೋಪಿಯನ್ನು ಕನಕಮಜಲಿನ ಅ೦ಗಾರ ಎ೦ಬವರ ಪುತ್ರ ಉಮೇಶ್ ಎಂದು ಗುರುತಿಸಲಾಗಿದೆ.
ಹತ್ಯೆಗೆ ಪ್ರೇಮ ಪ್ರಕರಣ ಕಾರಣ ಎಂದು ತಿಳಿದು ಬಂದಿದ್ದು, ಜಯಶ್ರೀಯನ್ನು ಉಮೇಶ್ ಪ್ರೀತಿಸುತ್ತಿದ್ದನು., ಬಿ.ಎಸ್.ಸಿ ಪದವೀಧರೆಯಾದ ಜಯಶ್ರೀ ಆತನ ಗುಣ ನಡತೆ ಇಷ್ಟವಾಗದ ಕಾರಣ 2022ರ ನವೆ೦ಬರ್ ವೇಳೆಗೆ ಉಮೇಶನನ್ನು ದೂರ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಉಮೇಶ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ.
ನಿನ್ನೆ ಜಯಶ್ರೀ ತಾಯಿ ಕೂಡ ಆತನೇ ಹತ್ಯೆ ಮಾಡಿರಬಹುದು ಎ೦ದು ಆರೋಪಿಸಿ ಠಾಣೆಗೆ ದೂರು ನೀಡಿದ್ದರು. ತಾಯಿ ನೀಡಿದ ದೂರಿನ ಅನ್ವಯ ಸಂ೦ಪ್ಯ ಪೊಲೀಸರು ಪ್ರಕರಣ ದಾಖಲಿಸಿ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.