(ವಿಶ್ವ ಕನ್ನಡಿಗ ನ್ಯೂಸ್) : ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಲಾಗಿದೆ. ಮಹಿಳೆ ರಾತ್ರಿ ಭದ್ರತೆಯನ್ನು ಪರಿಶೀಲಿಸಲು ಹೋದಾಗ ಈ ಘಟನೆ ನಡೆದಿದೆ. ತಪಾಸಣೆಯ ವೇಳೆ ಪಾನಮತ್ತರಾಗಿದ್ದ ದುಷ್ಕರ್ಮಿಗಳು ಅನುಚಿತವಾಗಿ ವರ್ತಿಸಿ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾದ ಸ್ವಾತಿ ಮಲಿವಾಲ್ ಅವರನ್ನು ಕಾರಿನಲ್ಲಿ 15 ಮೀಟರ್ ವರೆಗೆ ಎಳೆದೊಯ್ದಿದ್ದಾರೆ ಎಂಬುದು ದೂರು. ಏಮ್ಸ್ ಆಸ್ಪತ್ರೆ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದೆಹಲಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯೂ ಸುರಕ್ಷಿತವಾಗಿಲ್ಲದಿದ್ದರೆ, ಇತರ ಮಹಿಳೆಯರ ಗತಿಯೇನು ಎಂದು ಸ್ವಾತಿ ಮಲಿವಾಲ್ ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ಚಾಲಕ ಹರೀಶ್ ಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 3.11ರ ಸುಮಾರಿಗೆ ಸ್ವಾತಿ ಮಲಿವಾಲ್ ಏಮ್ಸ್ ಬಳಿಯ ಫುಟ್ ಪಾತ್ ಮೇಲೆ ನಿಂತಿದ್ದಾಗ ಹರೀಶ್ ಚಂದ್ರ ಅಲ್ಲಿಗೆ ಬಂದು ಕಾರು ಹತ್ತುವಂತೆ ಹೇಳಿದ್ದಾರೆ. ಸ್ವಾತಿ ಮಲಿವಾಲ್ ನಿರಾಕರಿಸಿದಾಗ, ಹರೀಶ್ ಚಂದ್ರ ಕಾರಿನೊಂದಿಗೆ ತೆರಳಿ, ಇದ್ದಕ್ಕಿದ್ದಂತೆ ಯು-ಟರ್ನ್ ತೆಗೆದುಕೊಂಡು ಮತ್ತೆ ಹಿಂತಿರುಗಿದರು. ಮತ್ತೆ ಬಲವಂತವಾಗಿ ಕಾರಿನೊಳಗೆ ಹತ್ತಿಸಿದರು. ಕಾರಿನಲ್ಲಿ ಸಿಲುಕಿದ್ದ ಸ್ವಾತಿಯನ್ನು ದುಷ್ಕರ್ಮಿಗಳು ಸುಮಾರು 15 ಮೀಟರ್ ವರೆಗೆ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಅಲ್ಲದೆ ಆತ ವಿಪರೀತ ಮದ್ಯ ಸೇವಿಸಿದ್ದ ಎಂದು ಸ್ವಾತಿ ಪೊಲೀಸರಿಗೆ ತಿಳಿಸಿದ್ದಾರೆ.
कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए। — Swati Maliwal (@SwatiJaiHind) January 19, 2023
कल देर रात मैं दिल्ली में महिला सुरक्षा के हालात Inspect कर रही थी। एक गाड़ी वाले ने नशे की हालत में मुझसे छेड़छाड़ की और जब मैंने उसे पकड़ा तो गाड़ी के शीशे में मेरा हाथ बंद कर मुझे घसीटा। भगवान ने जान बचाई। यदि दिल्ली में महिला आयोग की अध्यक्ष सुरक्षित नहीं, तो हाल सोच लीजिए।
— Swati Maliwal (@SwatiJaiHind) January 19, 2023
ಸ್ವಾತಿ ಜೊತೆ ಹೆಚ್ಚು ಮಂದಿ ಇದ್ದರು ಆದರೆ ಘಟನೆ ನಡೆದಾಗ ಸ್ವಲ್ಪ ದೂರದಲ್ಲಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಹಿಂಸಾಚಾರದ ಬಗ್ಗೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಹರೀಶ್ ಚಂದ್ರನನ್ನು ಬಂಧಿಸಲಾಗಿತ್ತು. ಹೊಸ ವರ್ಷಾಚರಣೆಯಂದು ಮಹಿಳೆಯೊಬ್ಬರು ಕಾರಿನ ಕೆಳಗೆ 13 ಕಿ.ಮೀ ಎಳೆದೊಯ್ದು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗಿರುವಾಗ ಮಹಿಳಾ ಆಯೋಗದ ಅಧ್ಯಕ್ಷೆ ಹಾಗೂ ಅವರ ತಂಡ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆಯ ಮೌಲ್ಯಮಾಪನಕ್ಕೆ ಬಂದಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.