ಶಾರ್ಜಾ (ವಿಶ್ವ ಕನ್ನಡಿಗ ನ್ಯೂಸ್) : ಕೇರಳದ ಯುವಕರೊಬ್ಬರು ತಾಯ್ನಾಡಿಗೆ ತೆರಳುತ್ತಿದ್ದ ವೇಳೆ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಣ್ಣೂರಿನ ಪಲ್ಲಿಕ್ಕರ ಸುಬುಲುಸ್ಸಲಾಂ ಮದರಸಾ ಬಳಿಯ ವಿಪಿ ಹೌಸ್ನ ಮುನೀರ್ ಅಬ್ದುಲ್ಲಾ (33) ಮೃತರು. ಊರಿಗೆ ತೆರಳಲು ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುನೀರ್ ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ.
ಮೃತರು ತಂದೆ ಅಬ್ದುಲ್ಲಾ, ತಾಯಿ ಹವ್ವ, ಪತ್ನಿ ಸಹಲಾ, ಮಗಳು ನದೀನ್ ನಸ್ರಾ, ಸಹೋದರರಾದ ಶಾಕಿರ್ ಅಬ್ದುಲ್ಲಾ (ಸೌದಿ ಅರೇಬಿಯಾ) ಮತ್ತು ಮುನೀಬ್ ಅಬ್ದುಲ್ಲಾ (ಬೆಂಗಳೂರಿನಲ್ಲಿ ವಿದ್ಯಾರ್ಥಿ) ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.