ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪತಿಯೊಬ್ಬ ಮೊದಲೇ ರೂಪಿಸಿದ್ದ ಸಂಚಿನಂತೆ ಪತ್ನಿಯನ್ನು ಕೊಲೆ ಮಾಡಿ ವಿಮಾನದಲ್ಲಿ ಪರಾರಿಯಾಗಿದ್ದ, ಇದೀಗ ಆತನನ್ನು ಸದ್ದುಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಸಿರ್ ಹುಸೇನ್ ಎಂಬಾತ ಆತನ ಪತ್ನಿ ನಾಝ್’ಳನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದವನಾದ ನಾಸಿರ್ ಹಾಗು ನಾಝ್ ಪ್ರೀತಿಸಿ ವಿವಾಹವಾಗಿದ್ದರು. ನಾಸಿರ್ ಕೊಲೆ ಮಾಡುವ ಮುನ್ನವೇ ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ಕೊಲೆ ಮಾಡಿದ ಬಳಿಕ ಟ್ಯಾಕ್ಸಿ ಮೂಲಕ ವಿಮಾನನಿಲ್ದಾಣಕ್ಕೆ ತೆರಳಿ, ಟ್ಯಾಕ್ಸಿ ಚಾಲಕನಿಗೆ 4000 ರೂ. ಹಣ ಫೋನ್ ಪೇ ಮಾಡಿ 3500 ರೂ. ಹಣವನ್ನು ಮರಳಿ ಪಡೆದುಕೊಂಡಿದ್ದ ಎಂದು ತಿಳಿದುಬಂದಿದೆ.
ವಿಮಾನ ಟೇಕ್ಆಫ್ ಆಗುತ್ತಿದ್ದಂತೆ ಪತ್ನಿಯ ಸಹೋದರನಿಗೆ ನಾನು ನಾಝ್ಳನ್ನು ಕೊಲೆ ಮಾಡಿದ್ದೇನೆ, ನಿನ್ನ ತಂಗಿಯ ಅಕ್ರಮ ಸಂಬಂದಕ್ಕೆ ಕೋಪಗೊಂಡು ಕೊಲೆ ಮಾಡಿದ್ದು, ಮನೆಗೆ ಹೋಗಿ ಮೃತದೇಹವನ್ನು ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿ ಮೊಬೈಲ್ ಆಫ್ ಮಾಡಿ ಕೊಂಡಿದ್ದ. ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಸುದ್ದಗುಂಟೆ ಪಾಳ್ಯ ಪೊಲೀಸರು ಮೊಬೈಲ್ ಜಾಡು ಹಿಡಿದು ದೆಹಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.