ಮಂಗಳೂರು (www.vknews.in) : ವರ್ಷದ ಹಿಂದೆ ಎಸ್ಡಿಪಿಐ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕೆಸಿ ರೋಡ್ ಎಸ್ಡಿಪಿಐ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಕೆಲ ವೈಯುಕ್ತಿಕ ಕಾರಣಗಳಿಂದ ನಾನು ಎಸ್ಡಿಪಿಐ ಪಕ್ಷವನ್ನು ತ್ಯಜಿಸುತ್ತಿದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಂಬಲ ನೀಡಿದ ಪಕ್ಷದ ಎಲ್ಲಾ ನಾಯಕರುಗಳಿಗೆ ಹಾಗೂ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿಗಾಗಿ ವಿಶ್ವ ಕನ್ನಡಿಗ ನ್ಯೂಸ್ ಅವರನ್ನು ಸಂಪರ್ಕಿಸಿದಾಗ ಪಕ್ಷ ತ್ಯಜಿಸುವ ನಿರ್ಧಾರ ತನ್ನ ವೈಯುಕ್ತಿಕ ಸಮಸ್ಯೆಗಳ ಕಾರಣದಿಂದ ತೆಗೆದುಕೊಂಡಿದ್ದು ಸದ್ಯ ಯಾವುದೇ ಪಕ್ಷ ಸೇರದೇ ರಾಜಕೀಯ ಕ್ಷೇತ್ರದಿಂದ ದೂರ ಉಳಿಯುವುದಾಗಿ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.