(ವಿಶ್ವ ಕನ್ನಡಿಗ ನ್ಯೂಸ್) : ಚುನಾವಣೆ ಬಂತೆಂದರೆ ಸಾಕು ರಾಜಕಾರಣಿಗಳ ಸಹಾನುಭೂತಿ ಬಯಂಕರ.ಪ್ರಣಾಳಿಕೆ,ಭರವಸೆ,ಅನುದಾನದ ರಾಶಿ ರಾಶಿ ಹೇಳಿಕೆಗಳು.ಬಾರಿ ಚಾಣಾಕ್ಷತೆ ತೋರಿ ಜಾತಿ,ಧರ್ಮಗಳಲ್ಲಿ ಪೈಪೋಟಿ ನಡೆಸಿ ಮತಗಳನ್ನು ಸುಲಭವಾಗಿ ಬಾಚುವ ಹಳೆಯ ಚಾಳಿ.ಕೇವಲ ಇನ್ನೆರಡು ತಿಂಗಳು ಸುನಾಮಿ ಫೀಲ್ಡ್.ಮತ್ತೆ ಅದೇ ಜಾತಿ ರಾಜಕಾರಣ ,ಪ್ರತಿನಿಧಿಗಳನಾಪತ್ತೆ. ಇದು ನಮ್ಮ ದೇಶದ ರಾಜಕೀಯ ವ್ಯವಸ್ಥೆ.ಮತದಾರನು ಈ ಬಗ್ಗೆ ಪಕ್ವತೆಯಿಂದ ಹೆಜ್ಜೆ ಹಾಕಬೇಕಾಗಿದೆ.ನಾವು ಪಕ್ಷ ಪಕ್ಷ ಎಂದು ಪರಸ್ಪರ ಅನಾವಶ್ಯಕ ಚರ್ಚೆ ನಡೆಸುತ್ತಾ, ಸಂಬಂಧಗಳಲ್ಲಿ ಒಡಕು ಮಾಡುತ್ತಾ ನಮ್ಮ ಪ್ರಜ್ಞಾವಂತಿಕೆಯನ್ನು ಕಳೆದು ಕೊಳ್ಳುತ್ತೇವೆ.ಕೇವಲ ಮತದಾನವೆಂಬ ಒಂದು ದಿನದ ಸಮರವನ್ನು ಅತ್ಯಂತ ಪ್ರಬುದ್ಧರಾಗಿ ಚಲಾಯಿಸುವುದೇ ಮತದಾರನಿಗಿರುವ ಅಸ್ತ್ರ.
ಸದಾ ಜನರೊಂದಿಗೆ ಬೆರೆಯುವ, ಸಾಮಾಜಿಕ ಕಳಕಳಿಯ ಪ್ರತಿನಿಧಿಯನ್ನು ಗುರುತಿಸಬೇಕು.ಕೊರೋನಾ,ನೆರೆ ಹಾವಳಿ ಮತ್ತು ಇತರ ಪ್ರಾಕ್ರತಿಕ ಸಂಕಷ್ಟಗಳಲ್ಲಿ ಜನರಿಗೆ ಸಹಾಯಕ್ಕೆ ಬಂದವರು, ಸಾಮಾಜಿಕ ಕಳಕಳಿಯಿರುವ,ವಿದ್ಯಾವಂತ,ಅನುಕಂಪವಿರುವ ಮತ್ತು ಜನರ ಹಕ್ಕುಗಳಿಗಾಗಿ ಹೋರಾಟ ಮತ್ತು ಧ್ವನಿ ಎತ್ತಿರುವ ಪ್ರತಿನಿಧಿಗಳನ್ನು ಗುರುತಿಸಿ.ಗೆದ್ದು ಬಂದರೆ ವಿಧಾನಸಭೆಯಲ್ಲಿ ಮಾತಾಡಬಲ್ಲ,ಹಕ್ಕುಗಳನ್ನು ಕೇಳಬಲ್ಲ ಪ್ರತಿನಿಧಿಗಳನ್ನು ಗುರುತಿಸಿ.ತೋಳ್ಬಲ,ಹಣಬಲ, ಕಾರ್ಪೋರೇಟ್ ಗಳ ಪ್ರಚಾರವನ್ನು ಕಂಡು ಆಕರ್ಷಿತರಾಗದಿರಿ.ಅವರ ಹೇಳಿಕೆಗಳನ್ನು ಸರಿಯಾಗಿ ಗಮನಿಸಿ.ಪ್ರತಿ ಭಾರಿ ತಪ್ಪು ಎಸಗದಿರಿ.ಸಮಾಜವನ್ನು ಬೆಳೆಸುವ ಜನ ಪ್ರತಿನಿಧಿಗಳನ್ನು ಚುನಾಯಿಸಿ ತಮ್ಮ ಮತದಾನದ ಬೆಲೆಯನ್ನು ಅರಿಯಿರಿ.ಚುನಾವಣೆಯ ಹಿಂದಿನ ರಾತ್ರಿ ಸೀರೆ, ಕುಕ್ಕರ್,ಹೆಂಡ ಮತ್ತು ಹಣಗಳ ಆಮಿಷಕ್ಕೆ ದಯವಿಟ್ಟು ಮತಗಳನ್ನು ಮಾರದಿರಿ.ಅವರು ಕೊಟ್ಟ ಆಮಿಷಗಳ ಕಾರಣದಿಂದ ಅವರು ಗೆದ್ದು ಬಂದರೆ ಪ್ರಶ್ನಿಸುವ ನೈತಿಕತೆ ಮತ್ತು ಎದೆಗಾರಿಕೆಯನ್ನು ಕಳೆಯುವಿರಿ.
ಮತದಾನ ನಮ್ಮಹಕ್ಕು ಮತ್ತು ಸಾಂವಿಧಾನಿಕ ಅಸ್ತ್ರವಾಗಿದೆ.
ಡಾ ಸುಮತಿ ಎಸ್ ಹೆಗ್ಡೆ (ಅಧ್ಯಕ್ಷೆ, ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.