(www.vknews.in) ; ಕುಟುಂಬ ಸಂಬಂಧ ಮುರಿಯುವವನು ಸ್ವರ್ಗ ಪ್ರವೇಶಿಸಲಾರನು ಎಂದಾಗಿದೆ ಪ್ರವಾದಿ ವಚನ. ಕುಟುಂಬ ಸಂಬಂಧ ಬಲಪಡಿಸುವವನಿಗೆ ಅಲ್ಲಾಹನಿಂದ ಬಹಳಷ್ಟು ಅನುಗ್ರಹಗಳಿವೆ. ಕುಟುಂಬ ಸಂಬಂಧಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಬಹಳಷ್ಟು ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. ಇದೇ ಬರುವ ಪೆಬ್ರವರಿ,14 ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹಾಲ್ ನಲ್ಲಿ ಕಡ್ಯ ಕುಟುಂಬ ಸಮ್ಮಿಲನ ನಡೆಯಲಿದೆ.
ಸರಿ ಸುಮಾರು ನೂರು ವರ್ಷಗಳ ಮುಂಚೆ ವ್ಯಪಾರಾರ್ಥ ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಬಂದು ಸರ್ವೆ ಗ್ರಾಮದ ರೆಂಜಲಾಡಿ ಸಮೀಪದ ಕಡ್ಯ ಎಂಬಲ್ಲಿ ನೆಲೆಸಿದ ಕುಟ್ಯಾಮಿ ಉಪ್ಪಾಪ ಎಂಬವರ ಒಂಬತ್ತು ಮಕ್ಕಳ, 52ಮೊಮ್ಮಕ್ಕಳ, ಮಕ್ಕಳು ಮೊಮ್ಮಕ್ಕಳು ಸೇರಿ ಸುಮಾರು 3-4 ತಲೆಮಾರಿನ, ಅಂದಾಜು ಸಾವಿರದಷ್ಟುಜನರು ಪಾಲ್ಗೊಳ್ಳುವ ಬೃಹತ್ ಸಮಾವೇಶ. ಕುಟ್ಯಾಮಿ ಉಪ್ಪಾಪ ಎಂಬ ತಾಯಿ ಬೇರಿನಿಂದ ಚಿಗುರಿದ ಹಲವು ರೆಂಬೆ ಕೊಂಬೆಗಳು, ಕಾಯಿ ಹಣ್ಣು, ಹೂವುಗಳು. ಈ ರೀತಿಯಲ್ಲಿ ಎಲ್ಲರೂ ಈ ಕುಟುಂಬ ಸಮ್ಮಿಲನದಲ್ಲಿ ತಮ್ಮ ಉಪಸ್ಥಿತಿಯನ್ನು ತೋರಿಸಲಿದ್ದಾರೆ.
ಮುಂಜಾನೆ ಪ್ರಾರಂಭವಾಗುವ ಕಾರ್ಯಕ್ರಮವು ಹಲವು ಮಜಲುಗಳನ್ನು ದಾಟಿ ಸಾಯಂಕಾಲ ಮುಕ್ತಾಯ ಕಾಣಲಿದೆ. ಕಡ್ಯ ಕುಟುಂಬದ ಪ್ರತಿಯೊಬ್ಬ ಹಿರಿಯ / ಕಿರಿಯ ಸದಸ್ಯನಿಗೂ ಈ ದಿನ ಹಬ್ಬದ ದಿನವಾಗಲಿದೆ.. ವಯೋಮಿತಿಗೆ ಅನುಸಾರವಾಗಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ವಿದ್ಯಾರ್ಥಿಗಳಿಗಾಗಿ, ಮಹಿಳೆಯರಿಗಾಗಿ ವಿವಿದ ಸ್ಪರ್ದೆಗಳು, ಕೊನೆಯದಾಗಿ ಕುಟುಂಬದಿಂದ ಮರಣ ಹೊಂದಿದ ಕುಟುಂಬ ಸದಸ್ಯರಿಗೆ ವಿಶೇಷ ಪ್ರಾರ್ಥನಾ ಮಜ್ಲಿಸ್ ಹೀಗೆ ಹಲವು… ಕಡ್ಯ ಕುಟುಂಬದ ಚರಿತ್ರೆಗಳನ್ನು ಒಂದೇ ಕೃತಿಯಲ್ಲಿ ಒಗ್ಗೂಡಿಸಿದ ಸ್ಮರಣೆ ಸಂಚಿಕೆ ಬಿಡುಗಡೆ ಕೂಡಾ ನಡೆಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.