ಗಾಝಾ (ವಿಶ್ವ ಕನ್ನಡಿಗ ನ್ಯೂಸ್) : ಆಕ್ರಮಿತ ಪಶ್ಚಿಮ ದಂಡೆ ಗಾಝಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಒಂಬತ್ತು ಫೆಲೆಸ್ತೀನೀಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ಗುರುವಾರ ನಡೆದ ದಾಳಿಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಅವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಫೆಲೆಸ್ತೀನಿಯರು ಈ ಘಟನೆಯನ್ನು “ಹತ್ಯಾಕಾಂಡ” ಎಂದು ಬಣ್ಣಿಸಿದ್ದಾರೆ. ಮೃತರಲ್ಲಿ ವೃದ್ಧ ಮಹಿಳೆಯೂ ಸೇರಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಮಗ್ಡಾ ಒಬೈದ್ ಎಂದು ಗುರುತಿಸಲಾಗಿದೆ.
ಹತ್ಯೆಯ ನಂತರ ಜೆನಿನ್ನಿಂದ ಹಿಂದೆ ಸರಿದ ಇಸ್ರೇಲ್ ಸೇನೆಯು ಮಹಿಳೆಯ ಸಾವಿನ ವರದಿಗಳನ್ನು ಪರಿಶೀಲಿಸುತ್ತಿದೆ ಎಂದು ಹೇಳಿದೆ. ಏತನ್ಮಧ್ಯೆ, ಫೆಲೆಸ್ತೀನ್ ರಾಜಕೀಯ ಪಕ್ಷ ಫತಾಹ್ಗೆ ಸಂಬಂಧಿಸಿದ ಸಶಸ್ತ್ರ ಪಡೆಗಳು ಅದರ ಹೋರಾಟಗಾರರಲ್ಲಿ ಒಬ್ಬರಾದ ಇಸ್ ಅಲ್-ದಿನ್ ಸಲಾಹ್ ಕೊಲ್ಲಲ್ಪಟ್ಟವರಲ್ಲಿ ಒಬ್ಬರು ಎಂದು ಹೇಳಿದರು. ಆರೋಗ್ಯ ಸಚಿವಾಲಯದ ಪ್ರಕಾರ, ಇನ್ನೊಬ್ಬ ವ್ಯಕ್ತಿ ಶೋಯೆಬ್ ಅಸ್ರಿಕಿ (24) ಆಸ್ಪತ್ರೆಯಲ್ಲಿ ನಿಧನರಾದರು.
ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯದಂತೆ ಇಸ್ರೇಲಿ ಮಿಲಿಟರಿ ತಡೆದಿದೆ ಎಂದು ಆರೋಪಿಸಲಾಗಿದೆ. ಫೆಲೆಸ್ತೀನ್ ಜನತೆಯನ್ನು ರಕ್ಷಿಸಲು ಮತ್ತು ಮಕ್ಕಳು, ಯುವಕರು ಮತ್ತು ಮಹಿಳೆಯರ ರಕ್ತಪಾತವನ್ನು ತಡೆಗಟ್ಟಲು ವಿಶ್ವಸಂಸ್ಥೆ ಮತ್ತು ಎಲ್ಲಾ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಶತಾಯೆ ಹೇಳಿಕೆ ನೀಡಿದ್ದಾರೆ. ಹಮಾಸ್ ಸೇರಿದಂತೆ ಫೆಲೆಸ್ತೀನ್ ಬಣಗಳು ಒಂದು ದಿನ ಶೋಕಾಚರಣೆ ಘೋಷಿಸಿದ್ದು, ಎಚ್ಚರಿಕೆ ನೀಡಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ. 2022 ರಲ್ಲಿ, ಇಂತಹ ದಾಳಿಗಳಲ್ಲಿ 170 ಕ್ಕೂ ಹೆಚ್ಚು ಫೆಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.