ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮಸ್ಕತ್ ಝೋನ್ ವತಿಯಿಂದ ಸಮಾಜ ಸೇವಕ ಹಾಜಿ ಅಬೂಬಕ್ಕರ್ ಕಬ್ಯಾಡಿ ರವರಿಗೆ ಸನ್ಮಾನಿಸಲಾಯಿತು.
ಹಲವಾರು ಸಂಘ ಸಂಸ್ಥೆ, ಹಾಗೂ ಸಮಾಜ ಸೇವೆಗಳಲ್ಲಿ ಗುರುತಿಸಿಕೊಂಡಿರುವ ಇವರನ್ನು ಕೆಸಿಎಫ್ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ KCF INC ನೇತಾರರಾದ ಇಕ್ಬಾಲ್ ಬರ್ಕ, ಇಬ್ರಾಹೀಂ ಹಾಜಿ ಅತ್ರಾಡಿ, ಹಂಝ ಹಾಜಿ ಕನ್ನಂಗಾರ್ ಹಾಗೂ ಉಬೈದುಲ್ಲಾ ಸಖಾಫಿ, ಕೆಸಿಎಫ್ ಒಮಾನ್ ನಾಯಕರುಗಳಾದ ಅಯ್ಯೂಬ್ ಕೋಡಿ, ಸ್ವಾದಿಕ್ ಹಾಜಿ ಸುಳ್ಯ, ಆರಿಫ್ ಕೋಡಿ, ಹಾಜಿ ಅಬ್ದುಲ್ ರಹಿಮಾನ್ ಮೋನಬ್ಬ(DKSC OMAN), ಲತೀಫ್ ಮಂಜೇಶ್ವರ, ಶಫೀಕ್ ಮಾರ್ನಬೈಲ್, ಡಾ ಅಬ್ದುಲ್ ರಝಾಕ್ ಕಾಪು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.