(www.vknews.in) ಉಪ್ಪಿನಂಗಡಿ: ಜ 26, ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ನಲಿಕಲಿ ಮಕ್ಕಳಿಗಾಗಿ ಅತ್ಯಾಕರ್ಷಕ ಶೈಲಿಯ ಚೆಯರ್ ಹಾಗೂ ಟೇಬಲನ್ನು ಶಾಲಾಭಿವೃಧ್ದಿ ಸಮಿತಿ ಹಾಗೂ ಶಿಕ್ಷಕರು ಸೇರಿದಂತೆ ದಾನಿಗಳ ಸಹಕಾರದಿಂದ ಒದಗಿಸಲಾಯಿತು.
ಇದರ ಉದ್ಘಾಟನೆಯನ್ನು ಶಾಲಾಭಿವೃಧ್ದಿ ಸಮಿತಿಯ ಹಿರಿಯ ಸದಸ್ಯರಾದ ಅಬ್ಬಾಸ್ ಹಾಗೂ ಕಡಬ ಠಾಣಾ ಎಎಸ್ಐ ಕನಕರಾಜ್ ರವರು ಜಂಟಿಯಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಮಾತನಾಡಿ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಮಕ್ಕಳು ಸರಿಯಾದ ವ್ಯವಸ್ಥೆಗಳಿಲ್ಲದೇ ನೆಲದಲ್ಲಿ ಕುಳಿತು ವಿದ್ಯಾರ್ಜನೆ ಮಾಡಬೇಕಾದ ಅನಿವಾರ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಶಾಲಾಭಿವೃಧ್ದಿ ಸಮಿತಿ ನಲಿಕಲಿ ಮಕ್ಕಳಿಗಾಗಿ ಸುಸಜ್ಜಿತ ಚೇರ್ ಹಾಗೂ ಟೇಬಲ್ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಿದಾಗ ಅತ್ಯುತ್ತಮ ರೀತಿಯಲ್ಲಿ ಶಿಕ್ಷಕರು ಶಾಲಾಭಿವೃಧ್ದಿ ಸಮಿತಿ ಸದಸ್ಯರು ಹಾಗೂ ಊರ ದಾನಿಗಳ ಸಹಕಾರದಿಂದ ಸರಿಸುಮಾರು ಮೂವತ್ತು ಸಾವಿರ ರೂಪಾಯಿಗಳ ಈ ಒಂದು ಯೋಜನೆ ಕಾರ್ಯರೂಪಕ್ಕೆ ಬರಲು ಕಾರಣವಾಯಿತು. ಸಹಕರಿಸಿದ ಸರ್ವರಿಗೂ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಎಂ, ಶಾಲಾಭಿವೃಧ್ದಿ ಸಮಿತಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸೆಲಿಕತ್, ವಾಮನ ಬರಮೇಲು, ಪದ್ಮನಾಭ ಶೆಟ್ಟಿ ಬಡಿಲ,ಸುಮಯ್ಯ, ಅಝೀಝ್. ಜಿ, ಕವಿ ಬರಹಗಾರ ಅಬ್ದುಲ್ ಗಫ್ಫಾರ್ ಕೆಮ್ಮಾರ, ಕಬೀರ್ ವಕೀಲರು ಬಂಟ್ವಾಳ, ಎಸ್.ಎಮ್ ಫ್ರೆಂಡ್ಸ್ ಇದರ ಅಧ್ಯಕ್ಷ ಖಲಂದರ್ ಎಸ್.ಪಿ, ಉದ್ಯಮಿ ರವೂಫ್ ಬಡಿಲ, ಅಝೀಝ್.ಜಿ, ಜುನೈದ್,ಹಂಝ.ಬಿ, ಅಧ್ಯಾಪಕ ವೃಂದದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.