(www.vknews.in) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡೆಕ್ಕಲ್ ನಲ್ಲಿ 74ನೇ ಗಣರಾಜ್ಯೋತ್ಸವ ಬಹಳ ಸಡಗರದಿಂದ ಆಚರಿಸಲಾಯಿತು ಹಿರೆಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ನೆಹರುತೋಟ ಧ್ವಜಾರೋಹಣ ನೆರವೇರಿಸಿದರು, ನಂತರ ಶಾಸಕರಾದ ಶ್ರೀಯುತ ಸಂಜೀವ ಮಠOದೂರು ರವರು ಕೊಡುಗೆ ನೀಡಿದ ಸ್ಮಾರ್ಟ್ ಬೋರ್ಡು ಹಾಗು ವಾಟರ್ ಪಿಯೂರಿ ಪೈರ್ ನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು, ನಂತರ ನಡೆದ ಸಭಾಕಾರ್ಯಕ್ರಮದ
ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಮ್ ಸಿ ಯ ಅಧ್ಯಕ್ಷರಾದ ಶ್ರೀ ರಮಾನಂದ ಗೌಡ ಇವರು ವಹಿಸಿದ್ದು,ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಹೈದರ್ ಅಡೆಕ್ಕಲ್ ಸಂಘದ ಮುಂಬರುವ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಿದರು. ಶ್ರೀ ರಮಾನಂದ ಗೌಡರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಶುಭ ಹಾರೈಸಿ ಶಾಲೆಯ ಅಭ್ಯುದಯದಲ್ಲಿ ಎಲ್ಲರ ಸಹಕಾರ ನೆನೆದರು. ಕಾರ್ಯಕ್ರಮ ದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶ್ರೀಮತಿ ಸುಮಯ್ಯ ರಫೀಕ್, ಎಸ್ ಡಿ ಎಮ್ ಸಿ ಸದಸ್ಯರಾದ ಶ್ರೀ ಅಬ್ಬಾಸ್ ಬಿ ಟಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ನವೀನ್ ಶೆಟ್ಟಿ, ಶಾಲಾ ಪ್ರಭಾರ ಮುಖ್ಯ ಗುರುಗಳಾದ ಶ್ರೀಮತಿ ಪರಿಣಿತಾಕ್ಷಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಿರೂಪಣೆ ಜಿ ಪಿ ಟಿ ಶಿಕ್ಷಕಿಯಾದ ಶ್ರೀಮತಿ ಕೃಷ್ಣಮ್ಮ ಕೆ ಇವರು ವಹಿಸಿದ್ದರು.ಪ್ರಭಾರ ಮುಖ್ಯಗುರುಗಳಾದ ಶ್ರೀಮತಿ ಪರಿಣಿತಾಕ್ಷಿ ಎಲ್ಲರನ್ನೂ ಸ್ವಾಗತಿಸಿ ದರೆ,ವಂದನಾರ್ಪಣೆಯನ್ನು ಅತಿಥಿ ಶಿಕ್ಷಕಿಯಾದ ಶ್ರೀಮತಿ ರೋಹಿಣಿ ಬಂಗೇರರವರು ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಇನ್ನೋರ್ವ ಅತಿಥಿಶಿಕ್ಷಕಿ ಶ್ರೀಮತಿ ಚಂಚಲಾಕ್ಷಿ ಮಾಡಿದರು.ಗೌರವಶಿಕ್ಷಕಿ ಕು.ಹೇಮಾವತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆನೆರವುನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.