(www.vknews.in) ಸೌಂಡ್ ವೇವ್ ಸ್ಟುಡಿಯೋ ಹಾಗೂ ವಿ.ಎಲ್.ಟಿವಿ ವತಿಯಿಂದ ಗಣರಾಜ್ಯೋತ್ಸವ ಸಮಾರಂಭ ಮತ್ತು ಗಣರಾಜ್ಯ ಸಂಗೀತೋತ್ಸವ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಯುರೊ ಪಾರ್ಟ್ಸ್ & ಮೇಂಚಸ್ಟರ್ ಕಂಟ್ರಾಕ್ಟಿಂಗ್ ದೋಹಾ ಕತಾರ್ ಇದರ ಆಡಳಿತ ನಿರ್ದೇಶಕ ಅಬ್ದುಲ್ಲ ಮೋನು ಮೊಯಿದಿನ್ ಸಂವಿಧಾನದ ಪೀಠಿಕೆ ಬೋದಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಮೋಹನ್ ಪ್ರಸಾದ್ ನಂತೂರು ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಬ್ಯಾರಿ ಫರಿಷತ್ ನ ಅಧ್ಯಕ್ಷ ಯು.ಹೆಚ್. ಖಾಲಿದ್ ಉಜಿರೆ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಜೂನಿಯರ್ ಮುಹಮ್ಮದ್ ರಫಿ ಖ್ಯಾತಿಯ ಮುಹಮ್ಮದ್ ಹನೀಫ್, ಕರಾವಳಿ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ಇದರ ಅಧ್ಯಕ್ಷರಾದ ನಝೀರ್ ಅಹ್ಮದ್, ಗ್ಲೋಬ್ ಫರ್ನಿಚರ್ ಮಂಗಳೂರು ಇದರ ಮಾಲಕ ಝಹೀರ್ ಅಬ್ಬಾಸ್, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ ಸ್ಥಾಪಕ ಅಧ್ಯಕ್ಷ ಅಬ್ದುಲ್ ರವೂಫ್ ಬಂದರ್, ಮುಂತಾದವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ನಂತರ ಪ್ರವೀಣ್ ಹಾಗೂ ಅಝರ್ ದಾಜಿನ್, ರವರಿಂದ ಗಣರಾಜ್ಯ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.
ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಮುಹಮ್ಮದ್ ಫೈಝ್ ಹಾಗೂ ಆರಿಫ್ ಕಾರ್ಯಕ್ರಮ ಸಂಯೋಜಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.