ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ನಗರದ ಫೈನಾನ್ಸ್ ಕಂಪನಿಯೊಂದರ ಉದ್ಯೋಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾರೆ. ಯುವತಿ ಶಿವಾನಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದು, ಪೊಲೀಸರು ಆಕೆಯನ್ನು ಪತ್ತೆ ಮಾಡಿ ಕರೆ ತಂದಿದ್ದಾರೆ.
ಶಿವಾನಿ ಜ.24ರಂದು ಕಂಕನಾಡಿ ಠಾಣೆಯ ಪೊಲೀಸ್ ಆಧಿಕಾರಿಗಳ ಮುಂದೆ ಹಾಜರಾಗಿ ತಾನು ಪ್ರೀತಿಸಿದವನನ್ನು ಸ್ವಇಚ್ಚೆಯಿಂದ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದು, ಪತಿಯೊಂದಿಗೆ ಬಾಳುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.
ಈ ಜೋಡಿ ಗೋವಾ, ಮುಂಬೈಗೆ ತೆರಳಿ, ಹಣದ ಸಮಸ್ಯೆ ಎದುರಾದಾಗ ಎರಡು ಮೊಬೈಲ್ ಫೋನ್ ಗಳನ್ನು ಮಾರಿ ಅದರ ಹಣದಿಂದ ಸ್ವಲ್ಪ ಸಮಯ ಕಳೆದಿದ್ದರು. ಪೊಲೀಸರು ಸ್ನೇಹಿತರ ಜತೆ ಇವರು ಸಂಪರ್ಕ ಹೊಂದಿದ್ದನ್ನು ಪತ್ತೆ ಹಚ್ಚಿ, ಯುಪಿಐ ಹಣವನ್ನು ಹಾಕಿದ ವಿಳಾಸ ಪತ್ತೆ ಮಾಡಿ ಈ ಜೋಡಿಯ ಸಂಪರ್ಕ ಸಾಧಿಸಿ ಕರೆ ತಂದಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.