(ವಿಶ್ವ ಕನ್ನಡಿಗ ನ್ಯೂಸ್) : ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಹದಿನೈದು ವರ್ಷದ ಹುಡುಗನೊಬ್ಬ ಇನ್ನೊಂದು ದೇಶಕ್ಕೆ ತಲುಪಿದ್ದಾನೆ. ಬಾಂಗ್ಲಾದೇಶದ ಹದಿನೈದು ವರ್ಷದ ಫಾಹಿಮ್ ಎನ್ನುವ ಬಾಲಕ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಸರಕು ಸಾಗಿಸುವ ಹಡಗಿನಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಆದರೆ ಆ ಹಡಗು ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ಹೋಗುತಿತ್ತು. ಇದನ್ನರಿತ ಬಾಲಕ ಹಡಗಿನಲ್ಲಿ ಮೌನವಾಗಿ ಕುಳಿತುಬಿಟ್ಟಿದ್ದ.
ಸರಕುಗಳನ್ನು ಸಾಗಿಸುತ್ತಿದ್ದ ಹಡಗು ಆರು ದಿನಗಳ ನಂತರ ಮಲೇಷ್ಯಾ ತಲುಪಿತು. ಪವಾಡವೆಂದರೆ ಬಾಲಕ ಆಹಾರ ಮತ್ತು ನೀರು ಇಲ್ಲದೆ ದಿನಗಟ್ಟಲೆ ಇದ್ದನು. ಮೂರು ದಿನಗಳ ಬಳಿಕ ಸರಕುಗಳ ಒಳಗಿನಿಂದ ಸದ್ದು ಕೇಳಿ ಬಂದಾಗ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಬಾಲಕನ ಪತ್ತೆಯಾಗಿದೆ.
ಬಾಲಕನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫಾಹಿಮ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕಾನೂನು ಮಾರ್ಗದ ಮೂಲಕ ಬಾಲಕನನ್ನು ಮನೆಗೆ ಕರೆತರಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಮಾನವ ಕಳ್ಳಸಾಗಣೆ ಕಂಡುಬಂದಿಲ್ಲ ಎಂದು ಮಲೇಷ್ಯಾ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.