ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ವರದಕ್ಷಿಣೆ ಕಿರುಕುಳ ತಾಳದೇ ಮಹಿಳೆಯೋರ್ವರು ರಾಸಾಯನಿಕ ಕುಡಿದು ಸಾವನ್ನಪ್ಪಿದ ಘಟನೆ ನಡೆದಿದೆ. ದೇವನಹಳ್ಳಿಯ ವಿಜಿಪುರ ಗ್ರಾಮದ ಮಾಧುರಿ (26) ಮೃತಪಟ್ಟ ಮಹಿಳೆ. ಬೆಂಗಳೂರಿನ ತೂಬರಹಳ್ಳಿಯ ನಿವಾಸಿ ಗುರುಪ್ರಸಾದ್ ಜತೆ 2016ರಲ್ಲಿ ಮದುವೆಯಾಗಿದ್ದ ಈ ದಂಪತಿಗೆ ಆರು ವರ್ಷದ ಒಬ್ಬ ಪುತ್ರ ಕೂಡ ಇದ್ದಾನೆ.
ಪತಿ ಗುರುಪ್ರಸಾದ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಮಾಧುರಿ ಗರ್ಭಿಣಿಯಾದಾಗಿನಿಂದ ಪತಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಆತನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗುತ್ತಿದೆ.
ಮಾಧುರಿ ಜನವರಿ 25ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಮನೆಯವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ಮಾಧುರಿಯಿಂದ ಜನವರಿ 26ರಂದು ಹೇಳಿಕೆ ಪಡೆದುಕೊಂಡಿದ್ದರು. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.