ರಾಮನಗರ (ವಿಶ್ವ ಕನ್ನಡಿಗ ನ್ಯೂಸ್) : ದೇವಸ್ಥಾನಗಳು ನಮ್ಮ ಬದುಕನ್ನ ಕಟ್ಟಿಕೊಡುವುದಿಲ್ಲ, ನಮಗೆ ರಾಮಮಂದಿರದ ಅಗತ್ಯವಿಲ್ಲ, ಅದರ ಬದಲಾಗಿ ಜನರಿಗೆ ಮೂಲ ಸೌಕರ್ಯ ಒದಗಿಸಿ ಎಂದು ನಟ, ಚಿಂತಕ ಚೇತನ್ ಅಹಿಂಸಾ ಹೇಳಿದ್ದಾರೆ.
ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ನಟ ಚೇತನ್ ನೇತೃತ್ವದಲ್ಲಿ ರಾಮನಗರ ತಾಲೂಕಿನ ಕೂನಮುದ್ದಹಳ್ಳಿಯ ದಲಿತ ಕಾಲೋನಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಚುನಾವಣೆಗಾಗಿ ಗಿಮಿಕ್ ಮಾಡ್ತಿದ್ದಾರೆ. ನಮಗೆ ರಾಮಮಂದಿರದ ಅವಶ್ಯಕತೆಯಿಲ್ಲ. ಇದನ್ನ ದಕ್ಷಿಣ ಅಯೋಧ್ಯೆ ಮಾಡಲು ಸರ್ಕಾರ ಕೂಡ ಅನುಮತಿ ನೀಡಬಾರದು. ಇದೆಲ್ಲವನ್ನು ಬಿಟ್ಟು ಮೊದಲು ಜನರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.