(www.vknews.in) ಸಂಯುಕ್ತ ಅರಬ್ ಸಂಸ್ಥಾನದ 51ನೇ ರಾಷ್ಟ್ರೀಯ ದಿನಾಚರಣೆ ಮತ್ತು 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡ ಸಂಘದವರು ರಕ್ತದಾನ ಶಿಬಿರ ಏರ್ಪಡಿಸಿ ದುಬೈ ಅರೋಗ್ಯ ಸಂಸ್ಥೆಯ ಬ್ಲಡ್ ಬ್ಯಾಂಕಿಗೆ ನೂರಾರು ರಕ್ತದಾನಿಗಳಿಂದ ರಕ್ತವನ್ನು ಶೇಖರಿಸಿ ಕಾರುಣ್ಯ ಸೇವೆ ಮಾಡಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಮತ್ತು ಯುಎಇ ನ್ಯಾಷನಲ್ ಡೇಯನ್ನು ಆಚರಿಸಿದರು, ದುಬೈಯ ವಿವಿಧ ಭಾಗಗಳಿಂದ ನೂರಾರು ರಕ್ತದಾನಿಗಳು ದುಬೈಯ ಅಲ್ ಜದಾಫಿನಲ್ಲಿರುವ ಹೆಲ್ತ್ ಆಥಾರಿಟಿ ಹೆಡ್ ಕ್ವಾರ್ಟರ್ಸ್ ಬ್ಲಡ್ ಡೊನೇಷನ್ ಸೆಂಟರಿಗೆ ಆಗಮಿಸಿ ಪುಣ್ಯವಾದ ಕಾರುಣ್ಯ ಸೇವೆಯಲ್ಲಿ ತಮ್ಮ ಅಮೂಲ್ಯವಾದ ರಕ್ತವನ್ನು ಮತ್ತು ಪ್ಲೇಟ್ಲೆಟ್ಸ್ ದಾನ ಮಾಡಿದರು ಮತ್ತು ಎಲ್ಲಾ ರಕ್ತದಾನಿಗಳಿಗೆ ಹೆಮ್ಮೆಯ ಕನ್ನಡಿಗರು ಸಮಿತಿ ಸದಸ್ಯರು ಬ್ಲಡ್ ಡೊನೇಷನ್ ಕ್ಯಾಂಪ್ ಸೆರ್ಟಿಫಿಕೇಟ್ ನೀಡಿ ಧನ್ಯವಾದಗಳನ್ನು ತಿಳಿಸಿದರು,
ರಕ್ತದಾನ ಶಿಬಿರವನ್ನು ಹೆಮ್ಮೆಯ ಕನ್ನಡಿಗರು ತಂಡದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಹಾದಿಯ ಮಂಡ್ಯ, ಮಧು ದಾವಣಗೆರೆ, ಅನಿತಾ ಬೆಂಗಳೂರು, ವರದರಾಜ್ ಕೋಲಾರ, ಅಕ್ರಮ್ ಕೊಡಗು, ಹಾದಿ ಕುಂದಾಪುರ, ಸ್ವಾತಿ ಚಿತ್ರದುರ್ಗ, ರಶೀದ್ ಮಂಗಳೂರು ಮುಂತಾದವರು ಮುನ್ನೆಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.