(www.vknews.in) ಬೆಂಗಳೂರು, ಫೆಬ್ರವರಿ 2023: ಟೂರಿಸಂ ಮಲೇಷಿಯಾ ತನ್ನ ಚೆನ್ನೈ ಕಛೇರಿಯಿಂದ ಟೂರಿಸಂ ಮಲೇಷಿಯಾ ಸಹಯೋಗದಲ್ಲಿ ಜನವರಿ 30ರಿಂದ ಫೆಬ್ರವರಿ 7, 2023ರವರೆಗೆ ಭಾರತದಲ್ಲಿ ರೋಡ್ಶೋನೊಂದಿಗೆ ಮ್ಯೂರಲ್ ಪ್ರದರ್ಶನದ ಅಭಿಯಾನ ಪ್ರಾರಂಭಿಸಲಿದೆ.
ಈ ಅಭಿಯಾನವು ಮಿಸ್ ಶೊಪಿಯಾ ಗೋ ಟ್ರಾವೆಲ್ ಜಗದೀಶ್ ಟೂರ್ಸ್ ಸಹಯೋಗದಲ್ಲಿ ಆಯೋಜಿಸುತ್ತಿದ್ದು ಮಲೇಷಿಯಾ ಪ್ಯಾಕೇಜ್ಗಳನ್ನು ಮ್ಯೂರಲ್ ಡಿಸ್ಪ್ಲೇ ಜಾಹೀರಾತಿನೊಂದಿಗೆ ಉತ್ತೇಜಿಸಲಿದೆ. ಇದರ ಮುಖ್ಯ ಉದ್ದೇಶ ಮಲೇಷಿಯಾ ಕುರಿತು ಅರಿವನ್ನು ಮೂಡಿಸುವುದ ಮತ್ತು ಸಾರ್ವಜನಿಕರಲ್ಲಿ ಮಲೇಷಿಯಾ ಭಾರತೀಯರ ಮನದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ ಎನ್ನುವುದು ದೃಢಪಡಿಸುವುದಾಗಿದೆ.
ಜಗದೀಶ್ ಟೂರ್ಸ್ನ ನಿರ್ದೇಶಕ ಶ್ರೀ ರಾಕೇಶ್ ಪಿ.”20 ಅಗಲ ಮತ್ತು 40 ಎತ್ತರದ ಮೂರು ಮ್ಯೂರಲ್ಗಳು ಬೆಂಗಳೂರಿನ ಸ್ಯಾಂಕೀ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಫೆಬ್ರವರಿ 2023ರವರೆಗೆ ಪ್ರದರ್ಶನಗೊಳ್ಳಲಿವೆ. ಇವು ಸಾರ್ವಜನಿಕರು ಮತ್ತು ಕಾರ್ಪೊರೇಟ್ ಕಛೇರಿಗಳು, ವಿರಾಮದ ಪ್ರವಾಸಿಗರು ಮತ್ತು ಸುತ್ತಮುತ್ತಲಿನ ಖರೀದಿದಾರರನ್ನು ಸೆಳೆಯಲಿವೆ. ಈ ಸಹಯೋಗವನ್ನು ಮತ್ತಷ್ಟು ತೀವ್ರಗೊಳಿಸಲು ಜಗದೀಶ್ ಟೂರ್ಸ್ ಫೆಬ್ರವರಿ 2ರಿಂದ 15, 2023ರವರೆಗೆ ಟಕಿ-ಟಕಿ ರೆಸ್ಟೋರೆಂಟ್ನಲ್ಲಿ ಮಲೇಷಿಯಾ ಆಹಾರ ಮೇಳವನ್ನೂ ಆಯೋಜಿಸಿದೆ.
ಟೂರಿಸಂ ಮಲೇಷಿಯಾದ ಇಂಟರ್ನ್ಯಾಷನಲ್ ಪ್ರೊಮೋಷನ್ ಡಿವಿಷನ್ನ ಸೀನಿಯರ್ ಡೆಪ್ಯುಟಿ ಡೈರೆಕ್ಟರ್ ಮೊಹಮ್ಮದ್ ಅಮಿರುಲ್ ರಿಜûಲ್ ಅಬ್ದುಲ್ ರಹೀಮ್, “ಟೂರಿಸಂ ಮಲೇಷಿಯಾದ ಪ್ರೊಮೋಷನ್ ಅಭಿಯಾನವು ಪ್ರವಾಸೋದ್ಯಮವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು 15.6 ಮಿಲಿಯನ್ ಅಂತಾರಾಷ್ಟ್ರೀಯ ಪ್ರವಾಸಿಗರ ಆಗಮನದಿಂದ 47.6 ಬಿಲಿಯನ್ ಎಂವೈಆರ್ ಅನ್ನು 2023ರಲ್ಲಿ ಗಳಿಸುವ ಗುರಿ ಹೊಂದಿದ್ದೇವೆ.
ಭಾರತವು ಮಲೇಷಿಯಾಗೆ ಪ್ರಮುಖ ಮಾರುಕಟ್ಟೆಯಾಗಿದೆ. ಕನೆಕ್ಟಿವಿಟಿ ದೃಷ್ಟಿಯಿಂದ ಪ್ರಸ್ತುತ ವಾರಕ್ಕೆ 169 ವಿಮಾನಗಳಿದ್ದು ಭಾರತದಿಂದ ಮಲೇಷಿಯಾಗೆ ಮಲೇಷಿಯಾ ಏರ್ಲೈನ್ಸ್, ಬಟಿಕ್ ಏರ್(ಹಿಂದೆ ಮಲಿಂಡೊ ಏರ್), ಏರ್ ಏಷ್ಯಾ ಮತ್ತು ಇಂಡಿಗೊಗಳಿಂದ 29,000 ಸೀಟುಗಳಿವೆ” ಎಂದರು. ಪ್ರಸ್ತುತ ಮಲೇಷಿಯಾ ಇತ್ತೀಚೆಗೆ ಇವಿಸಾ ಮಲ್ಟಿಪಲ್ ಎಂಟ್ರಿ ವಿಸಾ(ಎಂಇವಿ) ಸೌಭ್ಯವನ್ನು ಪ್ರಾರಂಭಿಸಿದ್ದು ಇದರಲ್ಲಿ ಫ್ಲೈ ಅಂಡ್ ಕ್ರೂಸ್, ವಿವಾಹ, ವೈದ್ಯಕೀಯ ಚಿಕಿತ್ಸೆ ಮತ್ತು ಬಿಸಿನೆಸ್ ಸಂದರ್ಶಕರಾಗುವ ಭಾರತದ ಪ್ರವಾಸಿಗರಿಗೆ ಆರು ತಿಂಗಳ ವಾರೆಂಟಿ, 30 ದಿನಗಳ ಉಳಿಯುವಿಕೆ ನೀಡುತ್ತಿದ್ದು ಕೇವಲ 1,000.00 ರೂ. ವೆಚ್ಚವಾಗುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.