(www.vknews.in) ನಾಪೋಕ್ಲು : ಸುನ್ನಿ ಯುವಜನ ಸಂಘ (ಎಸ್ ವೈ ಎಸ್ ) ಇದರ ನಾಪೋಕ್ಲು ಶಾಖೆಯ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಾಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಪೋಕ್ಲು ಪಟ್ಟಣದಲ್ಲಿರುವ ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಎಸ್ ವೈ ಎಸ್ ನಾಪೋಕ್ಲು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರನ್ನು ಆಯ್ಕೆಮಾಡಲಾಯಿತು. ಕಾರ್ಯದರ್ಶಿಯಾಗಿ ರಹೀಮ್ ಮಾಸ್ಟರ್,ಉಪಾಧ್ಯಕ್ಷರಾಗಿ ಬಿ.ಎ. ಅಬ್ಬಾಸ್, ಖಜಾಂಚಿಯಾಗಿ ಪಿ.ಎಂ. ಅರಫಾತ್, ದಹವಾ ಕಾರ್ಯದರ್ಶಿಯಾಗಿ ಶಾಹಿದ್ ಹಿಮಮಿ,ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಸಾದಿಕ್ ನಿಜಾಮಿ, ಅರ್ಷಾದ್, ಸದಸ್ಯರಾಗಿ ಪಿ.ಯು. ರಜಾಕ್, ಅಝೀಝ್ ಕಾರೆಕ್ಕಾಡ್, ಬಿ. ಯು.ಅಬ್ದುಲ್ ರಹ್ಮಾನ್,ಉಸೈನ್ ಲಿಮ್ರ, ಪಿ.ಎಂ.ಅನೀಫ್,ಅಹಮದ್ ಸಿ.ಎಚ್,ಆಯ್ಕೆಯಾದರು.
ನೂತನ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷರಾದ ಇಬ್ರಾಹಿಂ ಮುಸ್ಲಿಯಾರ್ ಹಾಗೂ ಆಡಳಿತ ಮಂಡಳಿಯವರು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಮೊಯಿದೀನ್ ವಿ.ಪಿ., ಮುಸ್ಲಿಂ ಜಮಾಅತ್ ಮುಖಂಡರಾದ ಎಂ.ಎಂ.ಮನ್ಸೂರ್ ಆಲಿ, ಅಮೀನ್ ಮುಸ್ಲಿಯಾರ್, ಅಹಮದ್ ಸಿ. ಎಚ್,ಮುನೀರ್ ಮುಸ್ಲಿಯಾರ್,ಹಾಗೂ ಎಸ್ ವೈ.ಎಸ್ ಕಾರ್ಯಕರ್ತರು, ಮತ್ತಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.