ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಅನಿವಾಸಿ ಭಾರತೀಯ ಯುವಕನೊಬ್ಬ ರಿಯಾದ್ ನಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಕೇರಳ ತಿರುವನಂತಪುರಂನ ಕೊಲ್ಲೆಡು ನಿವಾಸಿ ವನಜಕುಮಾರ್ ರಘುವರನ್ (49) ಎಂದು ಗುರುತಿಸಲಾಗಿದೆ. ರಿಯಾದ್ನಿಂದ ಸುಮಾರು 1200, ಕಿ.ಮೀ ದೂರದಲ್ಲಿರುವ ಉತ್ತರ ಗಡಿಯಲ್ಲಿರುವ ಅಲ್-ಖುರೈಯತ್ ಪಟ್ಟಣದ ಸನಾಅಯ್ಯಾ ಪ್ರದೇಶದಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಶುಕ್ರವಾರ ಮುಂಜಾನೆ ಒಗೆದ ಬಟ್ಟೆಗಳನ್ನು ಒಣಗಲು ಹಾಕಲು ಮಹಡಿಗೆ ಹೋಗಿದ್ದ ಅವರ ಸಹೋದ್ಯೋಗಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವನ್ನು ಕಂಡಿದ್ದಾರೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅವರು ಕೆಳೆದ ಏಳು ವರ್ಷಗಳಿಂದ ಊರಿಗೆ ಬಂದಿಲ್ಲ. ಅವರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅವರು ಕಳೆದ 25 ವರ್ಷಗಳಿಂದ ಆ ಸ್ಥಳದಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ ಖುರಾಯತ್ನ ಸನಾಯಾ ಪ್ರದೇಶದಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಕಾರ್ಯಾಗಾರವನ್ನು ನಡೆಸುತ್ತಿದ್ದರು. ಶವವನ್ನು ಅಲ್-ಖುರಾಯತ್ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.