(www.vknews.in); ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಜಲ್ಲಾ ಹಂತದಲ್ಲಿ ದಿನಾಂಕ 11-02-2023 ರಿಂದ 12-02-2023 ರವರೆಗೆ “ಮಕ್ಕಳ ವಿಕಾಸೋತ್ಸವ ” ಆಯೋಜಿಸಲಾಗುತ್ತದೆ.ಸಾಗರ ತಾಲೂಕಿನ ಆಚಾಪುರದ ಮುರುಘಾ ಮಠದಲ್ಲಿ ವಸತಿ ವ್ಯವಸ್ಥೆ ಸಹ ಇರುತ್ತದೆ.
ಹೆಸರಾಂತ ಮನೋವಿಜ್ಞಾನಿಗಳು, ಇನ್ಫೋಸಿಸ್ ನ ತಂತ್ರಜ್ಞರು,ಆಪ್ತ ಸಲಹೆಗಾರರು, ಸಾಹಿತಿಗಳು, ರಂಗ ಶಿಕ್ಷಕರು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವರು. ಶಿಬಿರದಲ್ಲಿ ಮಕ್ಕಳ ಮನೋವಿಕಾಸ ಮತ್ತು ಮನೋವಿಜ್ಞಾನ, ಮಕ್ಕಳ ಪ್ರತಿಭಾನ್ವೇಷಣೆ ಮತ್ತು ಆಪ್ತಸಮಾಲೋಚನೆ,ಅವಧಾನ, ಗ್ರಹಿಕೆ ಕೇಂದ್ರೀಕರಣ ಕೌಶಲ,ಮಕ್ಕಳ ತಿಳಿವು ಮತ್ತು ಅರಿವಿನ ದಾರಿಗಳು, ಮಕ್ಕಳ ಕಲಿಕೆಗಾಗಿ ತಂತ್ರಜ್ಞಾನ ಮತ್ತು ಸೃಜನಶೀಲತೆ ಮಕ್ಕಳ ಮನೋವಿಕಾಸಕ್ಕೆ ಜಾನಪದ ಕಲೆ ಮತ್ತು ಕ್ರೀಡೆಗಳು ವಿಷಯಗಳನ್ನು ಕೇಂದ್ರೀಕರಿಸಿ ತಜ್ಞರಿಂದ ತರಬೇತಿ ಶಿಬಿರ ಮತ್ತು ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಎರಡು ದಿನಗಳ ಕಾಲ ಇರುತ್ತದೆ.11 ರಿಂದ 18 ವರ್ಷದೊಳಗಿನ ಮಕ್ಕಳು ಉಚಿತವಾಗಿ ಭಾಗವಹಿಸಲು ಅವಕಾಶವಿರುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.