(www.vknews.in) ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಅವರ ಪ್ರಚಾರ ಪೋಸ್ಟರನ್ನು ಪಕ್ಷದ ಕಛೇರಿಯಲ್ಲಿ ಬಿಡುಗಡೆ ಗೊಳಿಸಲಾಯಿತು.
ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಕಟ್ಟೆ ಮಾತನಾಡಿ ಈ ಬಾರಿ ಬೆಳ್ತಂಗಡಿ ಜನತೆ ಅಕ್ಬರ್ ಬೆಳ್ತಂಗಡಿ ಅವರ ಕೈ ಹಿಡಿಯಲಿದ್ದಾರೆ ಪ್ರತಿ ಬೂತ್, ಗ್ರಾಮ ಮಟ್ಟದಲ್ಲಿ ಜನರು ಭಾರಿ ಒಳವು ತೋರಿಸಿದ್ದು ಕ್ಷೇತ್ರದ ಅಭ್ಯರ್ಥಿಯ ಜಯ ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಜಾಮ್ ಗೇರುಕಟ್ಟೆ, ಜೊತೆ ಕಾರ್ಯದರ್ಶಿ ಅಶ್ರಫ್ ಕಟ್ಟೆ, ಕೋಶಾಧಿಕಾರಿ ಸಾಲಿ ಮದ್ದಡ್ಕ, ಸಮಿತಿ ಸದಸ್ಯರಾದ ಅಬ್ದುಲ್ ಅಝೀಝ್ ಝುಹರಿ, ಬ್ಲಾಕ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.