ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಹೊಸ ವರ್ಷದ ಮುನ್ನಾದಿನದಂದು ದೆಹಲಿಯಲ್ಲಿ ಕಾರಿನ ಅಡಿಯಲ್ಲಿ ಸಿಲುಕಿದ್ದ ಮಹಿಳೆ ಮದ್ಯದ ಅಮಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿಧಿವಿಜ್ಞಾನ ವರದಿ ತಿಳಿಸಿದೆ. ಅಂಜಲಿಯ ಆಂತರಿಕ ಅಂಗಗಳ ಪರೀಕ್ಷೆಯ ಸಮಯದಲ್ಲಿ ಇದು ಬೆಳಕಿಗೆ ಬಂದಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅಂಜಲಿ ಮದ್ಯದ ಅಮಲಿನಲ್ಲಿದ್ದರು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪಡೆದ ಪರೀಕ್ಷಾ ಫಲಿತಾಂಶಗಳು ತಿಳಿಸಿವೆ.
ಅಂಜಲಿಯೊಂದಿಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಆಕೆಯ ಸ್ನೇಹಿತ ನಿಧಿ ಕೂಡ ಮಹಿಳೆ ಕುಡಿದಿದ್ದಳು ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಈ ಎಲ್ಲ ಆರೋಪಗಳನ್ನು ಅಂಜಲಿ ಕುಟುಂಬಸ್ಥರು ನಿರಾಕರಿಸಿದ್ದಾರೆ. ಜನವರಿ 1 ರಂದು ಮುಂಜಾನೆ ದೆಹಲಿಯ ಸುಲ್ತಾನ್ಪುರಿಯಲ್ಲಿ ಅಂಜಲಿ ಮತ್ತು ಅವರ ಸ್ನೇಹಿತನಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಅಡಿಯಲ್ಲಿ ಸಿಕ್ಕಿಬಿದ್ದ ಅಂಜಲಿಯನ್ನು ಹಲವಾರು ಕಿಲೋಮೀಟರ್ ಎಳೆದೊಯ್ಯಲಾಗಿತ್ತು. ಮಹಿಳೆ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಐವರು ಪ್ರಯಾಣಿಕರು ಮತ್ತು ಕಾರಿನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.