ಮುಂಬೈ (www.vknews.in) : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸೋಮವಾರದಂದು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆವಿ ಡ್ಯೂಟಿ ಟ್ರಕ್ಗಳಿಗಾಗಿ ಬಿಡುಗಡೆ ಮಾಡಿದ ಭಾರತದ ಮೊದಲ ಜಲಜನಕ (ಹೈಡ್ರೋಜನ್) ಇಂಟರ್ನಲ್ ಕಂಬಶ್ಚನ್ ಎಂಜಿನ್ ತಂತ್ರಜ್ಞಾನ ಸಲ್ಯೂಷನ್ ಅನ್ನು ಅನಾವರಣಗೊಳಿಸಿತು.
ಹೈಡ್ರೋಜನ್ ಇಂಟರ್ನಲ್ ಕಂಬಶ್ಚನ್ ಎಂಜಿನ್ (H2ICE) ಚಾಲಿತ ಟ್ರಕ್ಗಳು ಬಹುತೇಕ ಶೂನ್ಯ ಪ್ರಮಾಣದ ಹೊಗೆಯನ್ನು ಉಗುಳುತ್ತವೆ. ಸಾಂಪ್ರದಾಯಿಕ ಡೀಸೆಲ್ ಟ್ರಕ್ಗಳಿಗೆ ಸಮನಾದ ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು ಶಬ್ದವನ್ನು ಕಡಿಮೆ ಮಾಡುತ್ತದೆ ಹಾಗೂ ನಿರ್ವಹಣಾ ವೆಚ್ಚದಲ್ಲಿ ಯೋಜಿತ ಕಡಿತದೊಂದಿಗೆ ಗ್ರೀನ್ ಮೊಬಿಲಿಟಿಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತದೆ.
ಅದರ ನಿವ್ವಳ ಕಾರ್ಬನ್ ಝೀರೋ ದೃಷ್ಟಿಕೋನದ ಭಾಗವಾಗಿ, ರಿಲಯನ್ಸ್ ತನ್ನ ವಾಹನ ಪಾಲುದಾರ ಅಶೋಕ್ ಲೇಲ್ಯಾಂಡ್ ಮತ್ತು ಇತರ ತಾಂತ್ರಿಕ ಪಾಲುದಾರರೊಂದಿಗೆ ಕಳೆದ ವರ್ಷದಿಂದ ಈ ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದೆ.
ಮೊದಲ ಎಂಜಿನ್ಗಳು 2022ರ ಆರಂಭದಲ್ಲಿ ಚಾಲನೆ ಪಡೆದವು. ಹೆವಿ ಡ್ಯೂಟಿ ಟ್ರಕ್ಗಳಿಗಾಗಿ ಎಚ್್2ಐಸಿಇ (H2ICE) ತಂತ್ರಜ್ಞಾನವು ಅದರ ಮೊದಲ ವಾಣಿಜ್ಯ ನಿಯೋಜನೆ ದೊಡ್ಡ ಪ್ರಮಾಣದಲ್ಲಿ ಬಳಕೆ ಆಗುವ ಮುಂಚಿತವಾಗಿ ಅದರ ಆಂತರಿಕ ವಾಹನವಾಗಿ ಬಳಕೆ ಮಾಡುತ್ತದೆ. ಅದರ ಜತೆಜತೆಗೆ ಮೊಬಿಲಿಟಿಗಾಗಿ ಎಂಡ್-ಟು-ಎಂಡ್ ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ರೂಪಿಸುವ ಅವಕಾಶವನ್ನು ರಿಲಯನ್ಸ್ ಅನುಸರಿಸುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.