ಉಳ್ಳಾಲ (www.vknews.in) : ಜೆಡಿಎಸ್ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದಂತೆ ಮುಸ್ಲಿಂ ಸಮುದಾಯದ ವ್ಯಕ್ತಿಯೇ ಮುಖ್ಯಮಂತ್ರಿಯಾಗಲಿದ್ದಾರೆ, ಕಾಂಗ್ರೆಸ್ ಮತ್ತು ಬಿಜೆಪಿ ಮುಸ್ಲಿಂ ಸಮುದಾಯಕ್ಕೆ ವಂಚನೆಯನ್ನೇ ಮಾಡುತ್ತಾ ಬಂದಿದೆ. ಈ ಬಾರಿಯಾದರೂ ಸಮಸ್ತ ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಜೆಡಿಎಸ್ ಜೊತೆಗೆ ಕೈಜೋಡಿಸಿ ಸಿಕ್ಕಿರುವ ಅವಕಾಶ ದುರುಪಯೋಗವಾದಂತೆ ನೋಡಿಕೊಳ್ಳಿ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಹೈದರ್ ಪರ್ತಿಪ್ಪಾಡಿ ಹೇಳಿದ್ದಾರೆ.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಮುಸಲ್ಮಾನರನ್ನು ಮುಖ್ಯಮಂತ್ರಿ ಮಾಡುತ್ತೇನೆ ಅಂದಿರುವ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ. ಚುನಾವಣೆ ಫಲಿತಾಂಶ ನಿಮ್ಮನ್ನು ವ್ಯಂಗ್ಯವಾಡಲಿದೆ. ಬಹಳ ವರ್ಷಗಳಿಂದ ದೇಶ ಆಳಿದ ಕಾಂಗ್ರೆಸ್, ಬಿಜೆಪಿ ಮುಸಲ್ಮಾನರ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ. ರಾಜ್ಯದ ಮುಸ್ಲಿಂ ಸಮುದಾಯವನ್ನು ಯುವಕರು ಬೆಳೆಸಬೇಕು, ಈ ನಿಟ್ಟಿನಲ್ಲಿ ಪಕ್ಷದಲ್ಲಿ ಹೇಗಿರಬೇಕು ಅನ್ನುವುದನ್ನು ತಾವೇ ತೀರ್ಮಾನಿಸಬೇಕಿದೆ. ಕಾಂಗ್ರೆಸನ್ನು ಮುಸ್ಲಿಂ ಸಹೋದರರೇ ಸೇರಿಕೊಂಡು ಬೆಳೆಸಿದರು. ಕಾಂಗ್ರೆಸ್ ಯಾರನ್ನು ಮುಖ್ಯಮಂತ್ರಿ ಮಾಡಿದ್ದಾರೆ?ಡಿಕೆಶಿ, ಸಿದ್ದರಾಮಯ್ಯ ತಾಕತಿದ್ದರೆ ಹೇಳಿ ಎದೆತಟ್ಟಿ ಮುಸ್ಲಿಂ ಮುಖ್ಯಮಂತ್ರಿ ಮಾಡುವುದನ್ನು ಹೇಳಲಿ.
ಕುಮಾರಸ್ವಾಮಿಯವರನ್ನು ವ್ಯಂಗ್ಯ ಮಾಡುವುದು ಮುಖ್ಯವಲ್ಲ, ನಿಮ್ಮನ್ನೇ ಫಲಿತಾಂಶ ವ್ಯಂಗ್ಯವಾಡಲಿದೆ. ಮುಸ್ಲಿಂ ಸಮುದಾಯಕ್ಕೆ ಮಾತು ದೊಡ್ಡ ಸಂತೋಷವಾಗಿದೆ. ನಾಚಿಕೆಪಡಬೇಕು ಕಾಂಗ್ರೆಸ್ಸಿಗರೇ, ಹೇಳಿಕೆ ಕೊಡುವ ತಾಕತ್ತೇ ಇಲ್ಲ. ಅದು ಸಾಧ್ಯವೂ ಆಗುವುದಿಲ್ಲ. ಒಂದೇ ಮನೆಯಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು, ಸಂಸದರು ಇರುವುದು ಅದು ದೇವೇಗೌಡರ ಕುಟುಂಬದಲ್ಲಿ ಮಾತ್ರ. ಅಂತಹ ಗೌರವಯುತ, ತಾಕತ್ ಇರುವ ಮನೆತನವದು.ಕಾಂಗ್ರೆಸ್ ನವರು ಜಿ.ಪಂ,ತಾ.ಪಂ ಸದಸ್ಯರು, ಅಧ್ಯಕ್ಷರನ್ನಾಗಿ ಮಾಡಿಕೊಂಡು ಮುಸ್ಲಿಂ ಯುವಕರನ್ನು ವಂಚನೆಗೊಳಪಡಿಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾಡಿದ ಭಾಷಣ ಕಾಂಗ್ರೆಸ್ಸಿನಲ್ಲಿರುವ ಯಾರಿಗಾದರೂ ಮಾಡಲು ಸಾಧ್ಯವುಂಟಾ? ಎಂದು ಪ್ರಶ್ನಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.