ನಾಪೋಕ್ಲು (www.vknews.in) : ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಳಕೇರಿ ಗ್ರಾಮದಿಂದ ಕೋಕೇರಿ ಚೆಯ್ಯಂಡಾಣೆ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯು ಕಳೆದ ಮೂರು ದಶಕಗಳಿಂದ ದುರಸ್ಥಿ ಕಾಣದೆ ರಸ್ತೆಗಳು ಗುಂಡಿಮಯವಾಗಿ ವಾಹನಗಳ ಸಂಚಾರಕ್ಕೆ ದುಸ್ತರವಾಗಿದೆ.ಕೂಡಲೇ ರಸ್ತೆಯನ್ನು ದುರಸ್ಥಿ ಪಡಿಸಬೇಕು ಇಲ್ಲದಿದ್ದರೆ ಮುಂಬರುವ ಚುನಾವಣೆ ಬಹಿಸ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಕೊಳಕೇರಿ ಕೋಕೇರಿ ಗ್ರಾಮದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಎರಡು ಗ್ರಾಮದ ಜನರು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಗ್ರಾಮೀಣ ವಿಭಾಗದ ಜನರು ಹದಗೆಟ್ಟ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವುದೇ ಸಮಸ್ಯೆಯಾಗಿದೆ. ರಸ್ತೆ ಉದ್ದಕ್ಕೂ ಎಲ್ಲೆಲ್ಲೂ ಗುಂಡಿಗಳೇ ಕೂಡಿದ್ದು ವಾಹನ ಚಾಲಕರಿಗೆ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ಗುಂಡಿಗಳದೇ ದರ್ಬಾರು, ಜಲ್ಲಿಕಲ್ಲುಗಳೇ ರಸ್ತೆಯಲ್ಲಿ ರಾರಾಜಿಸುತ್ತಿವೆ. ಡಾಂಬರು ಎಂಬುದೇ ಮಾಯವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ವಾಹನಗಳ ಸಂಚಾರ ಪ್ರತಿನಿತ್ಯ ಸಾಕಷ್ಟು ಇದೆ.ದ್ವಿಚಕ್ರ ವಾಹನ ಸವರಾರು ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ಬಿದ್ದು ಆಸ್ಪತ್ರೆ ಸೇರಿದ ಘಟನೆ ಅಲವು ಭಾರಿ ನಡೆದಿದೆ.ಆಟೋರಿಕ್ಷಾಗಳು, ಖಾಸಗಿ ವಾಹನಗಳು, ಸೇರಿದಂತೆ ವಿವಿಧ ಶಾಲಾ ವಾಹನಗಳು, ಖಾಸಗಿ ಬಸ್ಸುಗಳು ಈ ರಸ್ತೆ ಯುದ್ಧಕ್ಕೂ ಸಂಚರಿಸುತ್ತವೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಖಾಸಗಿ ಬಸ್ಸು ಸಂಚರಿಸುತ್ತಿದ್ದು ಇದಕ್ಕೆ ಸಾಕಷ್ಟು ಪ್ರಯಾಣಿಕರು ಲಭಿಸಿದರೆ, ನಾಪೋಕ್ಲುವಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಈ ಗ್ರಾಮಗಳಿಂದ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯು ದೊಡ್ಡಮಟ್ಟದಲ್ಲಿದೆ, ಆದರು ವಿವಿಧ ವಾಹನಗಳು ಸಹ ಅವರನ್ನು ಕರೆತರಲು ಈ ರಸ್ತೆಯಲ್ಲಿ ಸಾಗುತ್ತಿವೆ. ಪ್ರತಿದಿನ ಬೆಳಗ್ಗೆ ವಿವಿಧ ಖಾಸಗಿ ಶಾಲೆಗಳ ಬಸ್ಸುಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ವಿದ್ಯಾರ್ಥಿಗಳು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳಕೇರಿ ಗ್ರಾಮದಿಂದ -ಕೋಕೇರಿಗ್ರಾಮಕ್ಕೆ ಸಂಪರ್ಕಕಲ್ಪಿಸುವ 4ಕಿ.ಮೀ ರಸ್ತೆಯನ್ನು ದುರಸ್ಥಿ ಪಡಿಸದೇ ನಮ್ಮನ್ನು ಕಡೆಗಣಿಸಿದೆ.ಈ ಎರಡು ಗ್ರಾಮಗಳಲ್ಲಿ ಸುಮಾರು 500ಕ್ಕೂ ಅಧಿಕ ಮತದಾರರುಇದ್ದಾರೆ. ಕಳೆದ ಮೂರು ದಶಕಗಳಿಂದ ರಸ್ತೆ ಕಾಮಗಾರಿ ಆಗದೆ ಹಾಗೆ ಉಳಿದಿದೆ ಎಂದು ಆರೋಪಿಸುತ್ತಾರೆ ಇಲ್ಲಿನ ಗ್ರಾಮಸ್ಥರು.
ಈ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸುವ ಸವಾರರು ಹೈರಾಣಾಗುತ್ತಿದ್ದಾರೆ.ಯಾವುದೇ ತುರ್ತು ಸಂದರ್ಭದಲ್ಲಿ ಈ ರಸ್ತೆಯಲ್ಲಿ ರೋಗಿಗಳನ್ನು ಸಾಗಿಸುವುದೇ ಕಷ್ಟಕರವಾಗಿದೆ.ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲಾಗದೆ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಇದೆ.ಪ್ರತೀ ವರ್ಷ ಗ್ರಾಮಸ್ಥರೆ ಹಣ ಹೊಂದಿಸಿ ಕಲ್ಲು ಮಣ್ಣುಗಳಿಂದ ರಸ್ತೆಯ ಗುಂಡಿಮುಚ್ಚಿ ದುರಸ್ತಿಪಡಿಸುವ ಅನಿವಾರ್ಯತೆ ಎದುರಾಗಿದೆ.ರಸ್ತೆಯ ಬಗ್ಗೆ ಅಲವಾರು ಭಾರಿ ಮಾಧ್ಯಮದ ಮೂಲಕ ಅಧಿಕಾರಿಗಳ ಗಮನ ಸೆಳೆದರೂ ಇದುವರೆಗೂ ಯಾವುದೇ ಪರಯೋಜನ ವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿಸಿದರು.
ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಪಕ್ಷಾತೀತವಾಗಿ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಗ್ರಾಮಸ್ಥರಾದ ಚೇನಂಡ ಹರೀಶ್, ಫೈಸಲ್,ಇಸ್ಮಾಯಿಲ್, ಹಮೀದ್, ಪೊನ್ನಚಂಡ ಅರುಣ, ಎಂ. ಎ.ಮೊಯ್ದು,ಗ್ರಾ. ಪಂ. ಸದಸ್ಯಆಶ್ರಫ್ ಕೆ.ವೈ, ಅಬ್ದುಲ್ ರಹ್ಮಾನ್, ಟಿ. ಸಿ. ಲವ, ಫಾರೂಕ್, ಅಲಿ, ಹಮೀದ್, ಲತೀಫ್ ಸೇರಿದಂತೆ ಅಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.