(ವಿಶ್ವ ಕನ್ನಡಿಗ ನ್ಯೂಸ್) : ಯಾರೋ ಒಬ್ಬರು ಕಳುಹಿಸಿದ ಸಂದೇಶಕ್ಕೆ, ಯಾರದ್ದೋ ಫೋಟೋ ಬಳಸಿ, ಯಾವುದೊ ವೀಡಿಯೋ ಬಳಸಿ, ಎಲ್ಲವನ್ನೂ ಒಟ್ಟುಗೂಡಿಸಿ ಸಾಮಾಜಿಕ ತಾಣಗಳಲ್ಲಿ ರವಾನಿಸುವ ಮುನ್ನ ಎಚ್ಚವಹಿಸಿ. ಇದು ನಿಮಗೆ ತಮಾಷೆಯಾದರೂ ಇದರಿಂದ ಸಾಕಷ್ಟು ಜನರಿಗೆ ತೊಂದರೆಗಳು ಉಂಟಾಗುತ್ತದೆ ಎಂಬುದು ಮರೆಯದಿರಿ.
ನಿನ್ನೆಯಷ್ಟೆ ಒಂದು ಮಹಿಳೆಯ ಧ್ವನಿ ಜೊತೆಗೆ ಒಂದು ಸಣ್ಣ ಪ್ರಾಯದ ಹೆಣ್ಣಿನ ಫೋಟೊ ಅದರ ಜೊತೆಗೆ ಯಾವುದೊ ಒಂದು ಉತ್ಸವದಲ್ಲಿ ತೊಟ್ಟಿಲು ತುಂಡಾಗಿ ಬೀಳುವ ದೃಶ್ಯ ಸಾಕಷ್ಟು ಜನರು ವೀಕ್ಷಿಸಿರಬಹುದು. ಇದರ ಸತ್ಯಾಂಶ ಅರಿಯದೆ ಒಬ್ಬರಿಗೊಬ್ಬರು ರವಾನಿಸುವುದಲ್ಲಿ ಬಿಝಿಯಾದರು. ಬಿ.ಸಿ ರೋಡ್ನಲ್ಲಿ ನಡೆಯುತ್ತಿರುವ ಉತ್ಸವ ಕಾರ್ಯಕ್ರಮದ ದೃಶ್ಯವೆಂದು ಸಾಕಷ್ಟು ಜನರು ವೈರಲ್ ಮಾಡುತ್ತಿದ್ದಾರೆ.
ದಯವಿಟ್ಟು ಗಮನಿಸಿ ಅಂತಹ ಅನಾಹುತ ನಡೆದಿಲ್ಲ. ಅದು ಹೊರ ರಾಜ್ಯದಲ್ಲಿ ನಡೆದ ದೃಶ್ಯ ಎಂಬುದು ತಿಳಿದಿದೆ. ಆ ಫೋಟೋದಲ್ಲಿರುವ ಹುಡುಗಿ ಇನ್ನೂ ಜೀವಂತವಾಗಿದ್ದಾಳೊ ಅಥವಾ ಮೃತಪಟ್ಟಿದ್ದಾಳೊ ಯಾರ ಮಗಳು ಎಂದು ತಿಳಿಯದೆ, ಯಾವುದೇ ಸ್ಫಷ್ಟನೆ ಇಲ್ಲದೆ ಯಾವ ಸಂದೇಶವನ್ನು ಕೂಡ ರವಾನಿಸದಿರಿ. ನಿಮಗೆ ಸಂಪೂರ್ಣ ಮಾಹಿತಿ ಲಭಿಸಿದರೆ ಮಾತ್ರ ಅಥವಾ ಕಣ್ಣಾರೆ ಕಂಡಿದರೆ ಮಾತ್ರ ರವಾನಿಸಿ. ನಿಮ್ಮ ಒಂದು ತಪ್ಪು ಸಾವಿರಾರು ಜನರ ನೆಮ್ಮದಿ ಕಳೆದುಕೊಳ್ಳುತ್ತವೆ ಎಂಬ ಜ್ಞಾನವಿರಲಿ..
ಜನರು ಯೋಚಿಸುವಷ್ಟು ತಾಳ್ಮೆ ಇರಲ್ಲ ಏನೇ ಬಂದರು, ಏನೇ ಕಂಡರು ಹಿಂದೆ ಮುಂದೆ ನೋಡದೆ ತಕ್ಷಣ ನಂಬಿ ಬಿಡುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹುಡುಗಿಯರ ಫೋಟೋಗಳನ್ನು ವೈರಲ್ ಮಾಡುವಾಗ ಸ್ವಲ್ಪ ಜಾಗೃತವಹಿಸಿ. ಕೆಟ್ಟ ಮನಸ್ಥಿತಿಯವರು ಅನಾವಶ್ಯಕವಾಗಿ ಫೋಟೋಗಳನ್ನು ಬಳಸಿ ಒಂದು ಜೀವದ ಜೊತೆ ಆಟವಾಡುವವರು ಸಾಕಷ್ಟು ಜನರಿದ್ದಾರೆ. ನಮ್ಮ ತಮಾಷೆಯಿಂದ ಇನ್ನೊಬ್ಬರ ಜೀವನ ಹಾಳಾಗದಿರಲಿ..
– ಡಿ.ಎಸ್.ಐ.ಬಿ ಪಾಣೆಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.