ಮನಾಮಾ (ವಿಶ್ವ ಕನ್ನಡಿಗ ನ್ಯೂಸ್) : ಬಹ್ರೇನ್ ನಲ್ಲಿ ಅನಿವಾಸಿ ಭಾರತೀಯ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಕೋಝಿಕೋಡ್ ನ ಕೊಯಿಲಾಂಡಿಯ ಫಾತಿಮಾ ಕ್ವಾರ್ಟರ್ಸ್ ನಿವಾಸಿ ಮುಹಮ್ಮದ್ ಫಸಲ್ (48) ಎಂದು ಗುರುತಿಸಲಾಗಿದೆ. ಅವರು ಬಹ್ರೇನ್ ಔಷಧಾಲಯದಲ್ಲಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ ಸಬೀರಾ, ಮಕ್ಕಳಾದ ಸಿಬಿಲಾ ಫಾತಿಮಾ ಮತ್ತು ಮೊಹಮ್ಮದ್ ನಿಜಾಮ್ ಅವರನ್ನು ಅಗಲಿದ್ದಾರೆ. ಸಹೋದರರು: ಯೂಸುಫ್, ರಫೀಕ್, ಶಜೀರ್, ಹಸೀಬ್, ಸಬೀಬಾ ಮತ್ತು ಸುನೀರ್. ಸಲ್ಮಾನಿಯಾ ಮೆಡಿಕಲ್ ಕಾಂಪ್ಲೆಕ್ಸ್ನ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹವನ್ನು ಬಹ್ರೇನ್ ಕೆಎಂಸಿಸಿ ನೇತೃತ್ವದಲ್ಲಿ ಸ್ವದೇಶಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.