(ವಿಶ್ವ ಕನ್ನಡಿಗ ನ್ಯೂಸ್) : ಮುಸ್ಲಿಮರ ಪವಿತ್ರ ಹಜ್ ಯಾತ್ರೆ 2023ನೇ ಸಾಲಿನಲ್ಲಿ ಸೌದಿ ಅರೇಬಿಯಾವು ಭಾರತಕ್ಕೆ ಸುಮಾರು 1.75 ಲಕ್ಷ ಕೋಟಾವನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಹಜ್ ಕಮಿಟಿಯು ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಹೊಸ ಹಜ್ ನಿಯಮದ ಪ್ರಕಾರ ಒಟ್ಟು ಕೋಟಾದ ಶೇ. 90 ಅನ್ನು ಭಾರತದ ಹಜ್ ಸಮಿತಿಗೆ ಹಂಚಲಾಗುತ್ತದೆ. ಉಳಿದವು ಖಾಸಗಿ ನಿರ್ವಾಹಕರಿಗೆ ಮೀಸಲಿರಿಸಲಾಗುತ್ತದೆ. ಹೀಗಾಗಿ ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷ ಭಾರತದ ಹಜ್ ಕೋಟಾದಲ್ಲಿ 1,75,025 ಜನರು ಹಜ್ ಯಾತ್ರೆ ಕೈಗೊಳ್ಳಬಹುದು.
ಆಕಾಂಕ್ಷಿಗಳಿಂದ ಆನ್ಲೈನ್ ಮೂಲಕ ಇಂದಿನಿಂದ (ಫೆ.10) ಪ್ರಾರಂಭವಾಗಿದ್ದು, ಹಜ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು ಅರ್ಜಿದಾರರು ಹಜ್-2023ರ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಭಾರತೀಯ ಹಜ್ ಕಮಿಟಿ ತಿಳಿಸಿದೆ.
ಹಜ್ನ ಮಾರ್ಗಸೂಚಿ (New Haj Policy) ಓದಲು ಇಲ್ಲಿ ಕ್ಲಿಕ್ ಮಾಡಿ: Haj 2023 Policy. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇರುವ ಲಿಂಕ್: Hajj Application Form
ನಿಯಮಗಳು ;
ಕೆಲವು ದಿನಗಳ ಹಿಂದೆ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೊಸ ಹಜ್ ನೀತಿಯನ್ನು ಘೋಷಿಸಿ, ಹಜ್ ಯಾತ್ರೆಗೆ ಹಿರಿಯರು, ಮಹಿಳೆಯರು, ವಿಶೇಷ ಚೇತನರಿಗೆ ಯಾತ್ರೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 45 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಮಹಿಳೆಯರೂ ತಾವೇ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು.
ಸೌದಿ ಅರೇಬಿಯಾದ ಅಧಿಕಾರಿಗಳು ನಿಗದಿಪಡಿಸುವ ವೇಳಾಪಟ್ಟಿ ಮತ್ತು ಮಾರ್ಗಸೂಚಿಗೆ ಅನುಸಾರವಾಗಿ ಪ್ರತಿ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಹಜ್ ಯಾತ್ರಿಗಳ ಮೊದಲ ತಂಡ ಪ್ರಯಾಣ ಆರಂಭಿಸುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ಭಾರತೀಯ ಹಜ್ ಯಾತ್ರಿಗಳು ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿತ್ತು. ಆದರೆ ಸಾಂಕ್ರಾಮಿಕದ ಮುಂಜಾಗ್ರತಾ ನಿರ್ಬಂಧಗಳಿಂದಾಗಿ ಭಾರತೀಯ ಕೋಟಾವನ್ನು 79 ಸಾವಿರಕ್ಕೆ ಸೀಮಿತಗೊಳಿಸಲಾಗಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.