ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಸಮಕಾಲೀನ ಸಮನ್ವಯ ಶಿಕ್ಷಣ ಸಂಸ್ಥೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರು ಇದರ ವಾರ್ಷಿಕ ಮಹಾಸಮ್ಮೇಳನ ಹಾಗೂ ಮಜ್ಲಿಸುನ್ನೂರ್ ಕಾರ್ಯಕ್ರಮ ಈ ಬರುವ 2023 ಮಾರ್ಚ್ 04 ಶನಿವಾರ ನಡೆಯಲಿರುವುದು. ಈ ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಅಂತರಾಷ್ಟ್ರೀಯ ಯುವ ವಾಗ್ಮಿ ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಆಗಮಿಸಲಿದ್ದಾರೆ.
ಮಾರ್ಚ್ 4ರಂದು ನಡೆಯುವ ವಾರ್ಷಿಕ ಮಹಾ ಸಮ್ಮೇಳನದ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ಸಂಘಟಕರು ಪ್ರಕಣೆಯಲ್ಲಿ ಮನವಿ ಮಾಡಿದ್ದಾರೆ. ಈ ಐತಿಹಾಸಿಕ ಸಮ್ಮೇಳನದ ವಿಜಯಕ್ಕಾಗಿ ಇಂದು ಮಗ್ರಿಬ್ ನಮಾಜ್ ಬಳಿಕ ಬೃಹತ್ ಸ್ವಾಗತ ಸಮಿತಿ ರಚನೆ ನಡೆಯಲಿದೆ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶಹೀದಿಯ್ಯ ನಗರ ಮಾಡನ್ನೂರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.